ತುಂಬಿದ ಸಭೆಯಲ್ಲಿ ಮಹಿಳಾ ಪ್ರತಿನಿಧಿಯ ಕೆನ್ನೆಗೆ ಹೊಡೆದ ಝಾರ್ಖಂಡ್ ಮಂತ್ರಿ!

0
1007

ಜಾಮತಾಡ, ಮಾ. 27: ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಿರುವ ಝಾರ್ಖಂಡಿನ ಕೃಷಿ ಸಚಿವ ರಣಧೀರ್ ಕುಮಾರ್ ಸಿಂಗ್ ಮಹಿಳಾ ಜನಪ್ರತಿನಿಧಿಗೆ ಕಪಾಲಮೋಕ್ಷ ನಡೆಸಿ ಅಪಮಾನಿಸಿದ್ದು ವ್ಯಾಪಕ ಚರ್ಚಾಗ್ರಾಸ್ತವಾಗಿದೆ. ದೆವಘರ್ ಜಿಲ್ಲಾ ಪರಿಷತ್‍ನ ಸದಸ್ಯೆ ಪಿಂಕಿ ಕುಮಾರಿಗೆ ಸಚಿವರು ಕೆನ್ನೆಗೆ ಹೊಡೆದು ಧೂರ್ತತನವೆಸಗಿದ್ದಾರೆ. ಜಮತಾಡಾ ಜಿಲ್ಲೆಯ ಕಾಲ ಝರಿಯ ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಪರಿಷತ್ ಸದಸ್ಯೆ ಪಿಂಕಿ ಕುಮಾರಿ ಕೂಡ ಭಾಗವಹಿಸಿದ್ದರು. ಅಲ್ಲಿಗೆ ಕೃಷಿ ಸಚಿವ ರಣಧೀರ್ ಸಿಂಗ್ ಕೂಡ ಬಂದರು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ ಇವರಿಬ್ಬರ ನಡುವೆ ಯಾವುದೋ ಮಾತಿನ ಚಕಮಕಿ ನಡೆಯಿತು. ನಂತರ ಸಚಿವರು ಪಿಂಕಿ ಕುಮಾರಿಯನ್ನು ನಿಂದಿಸಿ ಜೋರಾಗಿ ಕಪಾಲಕ್ಕೆ ಹೊಡೆದರು ಎನ್ನಲಾಗಿದೆ.