ಪುಣೆ,ಎ.5: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನನಗೆ ದ್ವೇಷವಿಲ್ಲ, ಪ್ರೀತಿ ಮಾತ್ರ ಇದೆ. ಆದರೆ ಮೋದಿಗೆ ತನ್ನೊಡನೆ ದ್ವೇಷವಿದೆ ಎಂದು ಪುಣೆಯ ಸಮೀಪ ಕಾಲೇಜುವಿದ್ಯಾರ್ಥಿಗಳೊಡನೆ ನಡೆಸಿದ ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿದರು. ಬಾಲ್ಯ ಕಾಲದ ತನ್ನ ನೆನಪುಗಳನ್ನು ಬಿಚ್ಚಿಟ್ಟ ಅವರು ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಚೇರಿಯಿಂದ ಮರಳುವ ಸಮಯದಲ್ಲಿ ತಾನು ಮನೆಯಲ್ಲಿ ಕರ್ಟನ್ ಹಿಂದೆ ಅಡಗಿ ಕುಳಿತು ಕೊಳ್ಳುತ್ತಿದೆ. ಅವರ ಮುಂದೆ ಹಾರಿ ಹೆದರಿಸಲು ಶ್ರಮಿಸುತ್ತಿದ್ದೆ. ಅಜ್ಜಿ ಹೆದರುತ್ತಿರಲಿಲ್ಲ ಎಂದು ತನಗೆ ಇಂದು ಗೊತ್ತು. ಆದರೆ ಕೆಲವೊಮ್ಮೆ ಹೆದರಿದಂತೆ ಅಜ್ಜಿ ತೋರಿಸಿಕೊಳ್ಳುತ್ತಿದ್ದರು. ಬಾಲ್ಯದಿಂದಲೇ ನಿಕಟ ಮಿತ್ರರಾಗಿ ಪ್ರಿಯಾಂಕ ಮಾತ್ರ ಇದ್ದಾರೆ ಎಂದು ರಾಹುಲ್ ಗಾಂಧಿ ಬಾಲ್ಯಕಾಲವನ್ನು ಬಣ್ಣಿಸಿದರು.
ಬಾಲ್ಯಕಾಲದಿಂದಲೇ ಕಂಪಿಸುವ ಕೆಲವು ಘಟನೆಗಳಿಗೆ ಸಾಕ್ಷಿಯಾಗಬೇಕಾಗಿ ಬಂತು. ತನ್ನ ಅಜ್ಜಿಯ ಕೊಲೆಯಾಯಿತು. ನಂತರ ತಂದೆ ರಾಜೀವ್ ಗಾಂಧಿಯ ಹತ್ಯೆಯಾಯಿತು. ಈ ಸಂದರ್ಭಗಳೆಲ್ಲ ಧೈರ್ಯ ತುಂಬಿದ್ದು ಪ್ರಿಯಾಂಕಾ. ಅವರ ರಾಜಕೀಯ ಪ್ರವೇಶದ ಬಳಿಕವೂ ಯಾವುದೇ ಅಂತರ ನಮ್ಮ ನಡುವೆ ಆಗಿಲ್ಲ. ಅವರು ಕಟ್ಟುವ ರಾಖಿಯನ್ನು ಮುಂದಿನ ವರ್ಷದವರೆಗೆ ತಾನು ಬಿಚ್ಚಿಡುವುದಿಲ್ಲ. ಹಿಂದೆಲ್ಲ ನಮ್ಮಲ್ಲಿ ಜಗಳ ಆಗುತ್ತಿತ್ತು. ಆದರೆ ನಮ್ಮಲ್ಲಿ ಒಬ್ಬರು ಮುಂದೆ ಬಂದು ಜಗಳವನ್ನು ಕೊನೆಗೊಳಿಸಿಬಿಡುತ್ತಿದ್ದೆವು ಎಂದು ರಾಹುಲ್ ಹೇಳಿದರು.
ಯುವಕರು ಸಾಮಾಜಿಕ ಮಾಧ್ಯಮಗಳಿಗೆ ಅಡಿಕ್ಟ್ ಆಗಿರುವ ಕುರಿತು ಇರುವ ಜಗತ್ತಿನ ಭಾವನೆಯನ್ನು ವಿದ್ಯಾರ್ಥಿಗಳು ರಾಹುಲ್ರ ಮುಂದಿಟ್ಟರು. ಭಾವನಾ ಲೋಕದಲ್ಲಿ ಬದುಕಲು ಯಾರಾದರೂ ತೀರ್ಮಾನಿಸುವುದಾದರೆ ಇವರಿಗೆ ಅದಕ್ಕೆ ಅವಕಾಶ ನೀಡಬೇಕು ಎಂದು ರಾಹುಲ್ ಹೇಳಿದರು. ಆದರೆ ಒಮ್ಮೆ ಎಲ್ಲರೂ ವಸ್ತುಸ್ಥಿತಿಯನ್ನು ಎದುರಿಸಲೇ ಬೇಕಾಗುತ್ತದೆ. ಸಾಮಾಜಿಕ ಮಾಧ್ಯಮಗಳು ನಿಮ್ಮ ತಂದೆತಾಯಿಯರನ್ನು ರಕ್ಷಿಸುವುದಿಲ್ಲ. ಈ ಘಟ್ಟದಲ್ಲಿ ಕೆಲವೊಮ್ಮೆ ಕಟು ವಾಸ್ತವಿಕತೆಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸೇನೆ ನಡೆಸಿದ ವಾಯುದಾಳಿಯ ಶ್ರೇಯ ಯಾರಿಗೆ ಸಂಬಂಧಿಸಿದ್ದು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದಾಗ ಅದು ಭಾರತದ ವಾಯು ಸೇನೆಗೆ ಸಲ್ಲುತ್ತದೆ ಎಂದು ರಾಹುಲ್ ಹೇಳಿದರು. ವಾಯುದಾಳಿಯಂತಹ ವಿಷಯಗಳನ್ನು ರಾಜಕೀಕರಣ ಗೊಳಿಸುವುದರಲ್ಲಿ ತನಗೆ ಸಹಮತ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
WATCH: CP @RahulGandhi in conversation with our changemakers in Pune. #RahulGandhiStudentsInteraction https://t.co/WpDME1pANO
— Congress (@INCIndia) April 5, 2019












