ಪುರುಷರಿಗಿಂತ ಮಹಿಳೆಯರ ಕೈಯಲ್ಲಿ ದೇಶ ಸುರಕ್ಷಿತ; ಮಹಿಳೆ ಪ್ರಧಾನಿಯಾಗಲಿ

0
995

ಮತ- ಜನಾಭಿಪ್ರಾಯ

✒ಪಿ.ಲಿಸಿ

ಹಾಲಿ ಚುನಾವಣೆಯ ಕುರಿತು ಮಹಿಳೆಯ ಅಭಿಪ್ರಾಯ
ಈ ಬಾರಿಯ ಚುನಾವಣೆ ಬಹಳ ಸೂಕ್ಷ್ಮವಾಗಿದ್ದು ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ದಲಿತ, ಆದಿವಾಸಿ, ಮುಸ್ಲಿಂ , ಹಿಂದುಳಿದ ವಿಭಾಗದ ಮತಗಳು ಚುನಾವಣೆಯಲ್ಲಿ ಹೆಚ್ಚು ನಿರ್ಣಾಯವಾಗಲಿದೆ. ಯಾರಿಗೆ  ಮತಹಾಕಿದರೂ ಅದು ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ಬರುವಂತಾಗಬಾರದು. ಕಳೆದ ಐದುವರ್ಷಗಳಲ್ಲಿ ಕೇಂದ್ರ ಸರಕಾರ ಮಾಡಿದ್ದನ್ನು ಬರೆದು ವಿವರಿಸಲು ಸಾಧ್ಯವಿಲ್ಲ. ವಂಶ ಹತ್ಯೆ ಅದರ ಉದ್ದೇಶವಾಗಿದೆ. ಇನ್ನು ಅದು ಮುಂದುವರಿಯಬಾರದು. ಸಂವಿಧಾನವನ್ನು ಕೂಡ ಅವರು ಸುಟ್ಟು ಹಾಕಿದರು. ನಾಳೆ ಇದು ಇನ್ನು ಮುಂದುವರಿಯುವಂತಿರಬಾರದು. ನಾಳೆ ಪ್ರಜಾಪ್ರಭುತ್ವ ವಾದಿಗಳನ್ನುಕೂಡ ಕೊಂದು ಹಾಕುವ ಸಮಯ ಕೂಡ ಬಂದೀತು. ಭಾರತ ಸಂವಿಧಾನ ಅಸ್ತಿತ್ವದಲ್ಲಿ ಉಳಿಯದರೆ ಮಾತ್ರವೇ ಮನುಷ್ಯರಿಗೆ ಇಲ್ಲಿ ಬದುಕಲು ಸಾಧ್ಯವಿದೆ. ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಬೇಕೆಂದು ಹೇಳುವಾಗ ಅವರು ಉಳಿದ ಶೇ.50 ರಷ್ಟು ಗುಲಾಮತ್ವವನ್ನು ಹೇರುತ್ತಿದ್ದಾರೆ.

ಅಭ್ಯರ್ಥಿಗಳಲ್ಲಿ ಮಹಿಳೆಯರು ತುಂಬ ಕಡಿಮೆ ಇದ್ದಾರೆ. ಕೇರಳದಲ್ಲಿ ಮಹಿಳಾ ಗೋಡೆಗೆ ಕೇರಳದಲ್ಲಿ ಲಕ್ಷಾಂತರ ಮಹಿಳೆಯರನ್ನು ಕಲೆಹಾಕಿದ ಕಮ್ಯುನಿಸ್ಟರಲ್ಲಿ ಎಷ್ಟು ಮಹಿಳೆಯರು ಅಭ್ಯರ್ಥಿಗಳಿದ್ದಾರೆ. ನಿಜವಾಗಿ ಪುರುಷರಿಗಿಂತ ಮಹಿಳೆಯರ ಕೈಯಲ್ಲಿ ದೇಶ ಸುರಕ್ಷಿತವಾಗಿರಬಲ್ಲುದು. ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ಅದಕ್ಕೆ ಪರಿಹಾರ ಕಂಡು ಕೊಳ್ಳಲು ಮಹಿಳೆಯರಿಂದ ಸಾಧ್ಯ. ಜನರ ಅಗತ್ಯಗಳು, ನೋವುಗಳು ಎಲ್ಲವನ್ನೂ ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲರು. ಪ್ರಧಾನಿ ಸ್ಥಾನಕ್ಕೆ ಸಮರ್ಥ ಮಹಿಳೆ ಬರಬೇಕಾದ ಸಮಯ ಆಗಿದೆ. ಹೀಗೆಯೇ ಸಂಭವಿಸೀತೆನ್ನುವ ನಿರೀಕ್ಷೆ ನನಗಿದೆ.