ಜಮ್ಮು ಗ್ರೆನೇಡ್ ಸ್ಫೋಟ; ಮೃತರ ಸಂಖ್ಯೆ 2ಕ್ಕೇರಿಕೆ

0
612

ಶ್ರೀನಗರ,ಮಾ.8: ಜಮ್ಮುಕಾಶ್ಮೀರದ ಬಸ್‍ಸ್ಟಾಂಡಿನಲ್ಲಿ ನಿನ್ನೆ ಸಂಭವಿಸಿದ ಗ್ರೆನೆಡ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿಕೆಯಾಗಿದೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಗುರುವಾರ ಜಮ್ಮುವಿನ ಜನನಿಬಿಡ ಬಸ್‍ನಿಲ್ದಾಣದಲ್ಲಿ ಗ್ರೆನೆಡ್ ಸ್ಫೋಟ ಸಂಭವಿಸಿತ್ತು.

ನಿನ್ನೆ ನಡೆದ ಸ್ಫೋಟದಲ್ಲಿ ಮುಹಮ್ಮದ್ ಶರಿಕ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಹಿಝ್ಬುಲ್ ಮುಜಾಹಿದೀನ್ ಸ್ಫೋಟದ ಹೊಣೆಯನ್ನು ವಹಿಸಿಕೊಂಡಿದೆ ಎಂದು ಜಮ್ಮು ಪೊಲೀಸ್ ಮುಖ್ಯಸ್ಥ ಎಂಕೆ ಸಿಂಗ್ ತಿಳಿಸಿದ್ದಾರೆ.

ಯಾಸಿರ್ ಜಾವೇದ್ ಬಟ್ ಎಂಬಾತ ಸ್ಫೋಟ ನಡೆಸಿದ್ದನು ಎಂದು ಜಮ್ಮು-ಕಾಶ್ಮೀರ್ ಪೊಲೀಸರು ತಿಳಿಸಿದರು. ಸ್ಪೋಟದ ಬಳಿಕ ಈತ ಪಾರಾಗಲು ನೋಡಿದಾಗ ಯಾಸಿರ್‍ನನ್ನು ಬೆನ್ನಟ್ಟಿ ಹಿಡಿಯಲಾಗಿತ್ತು. ಗ್ರೆನೆಡ್ ಸ್ಫೋಟದಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದರು.