ಲಕ್ನೋ(ಫೆ.7): 2019- 20 ನೇ ಸಾಲಿನ ಬಜೆಟ್ ನಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರವು ಒಟ್ಟು ₹647 ಕೋಟಿ ರೂಪಾಯಿಗಳನ್ನು ಗೋವುಗಳ ಸಂರಕ್ಷಣೆಗಾಗಿ ಮೀಸಲಿರಿಸಿದೆ. ಯುಪಿಯ ಹಣಕಾಸು ಸಚಿವರಾದ ರಾಜೇಶ್ ಅಗರ್ ವಾಲ್ ಸಂಸತ್ತಿನಲ್ಲಿ ವಾರ್ಷಿಕ ಬಜೆಟ್ ನ್ನು ಮಂಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಗೋ ಶಾಲೆಗಳನ್ನು ನಿರ್ವಹಿಸಲು 247. 60 ಕೋಟಿ ರೂಪಾಯಿ, ಹಾಗೂ ನಗರ ಪ್ರದೇಶದಲ್ಲಿ” ಕನ್ಹಾ ಗೋ ಶಾಲಾ ಹಾಗೂ ಬೇಸಹಾರ ಪಶು ಆಶ್ರಮ್” ಎಂಬ ಯೋಜನೆಯಡಿಯಲ್ಲಿ ಗೋಶಾಲೆಗಳನ್ನು ನಿರ್ವಹಿಸಲು ತಲಾ 200 ಕೋಟಿ ರೂಪಾಯಿಯನ್ನು ಮೀಸಲಿರಿಸಿರುವುದಾಗಿ ತಿಳಿಸಿದರು.
ಆದರೆ ದೀನ್ ದಯಾಳ್ ಉಪಾಧ್ಯಾಯ್ ಸಣ್ಣ ಡೈರಿ ಉದ್ಯಮ ಯೋಜನೆಗಾಗಿ ಕೇವಲ 67 ಕೋಟಿ ರೂಪಾಯಿಯನ್ನು ಮೀಸಲಿರಿಸಿದೆ.
2017 ರಲ್ಲಿ ಉತ್ತರಪ್ರದೇಶದಲ್ಲಿ ಯೋಗಿ ಸರಕಾರವು ಆಡಳಿತದ ಚುಕ್ಕಾಣಿ ಹಿಡಿದ ನಂತರ ಮಂಡಿಸಿದ ಮೂರನೆಯ ವಾರ್ಷಿಕ ಬಜೆಟ್ ಇದಾಗಿದ್ದು ಸರಕಾರವು ಕಳೆದ ಜನವರಿ ತಿಂಗಳಿನಿಂದ ಬಿಡಾಡಿ ಗೋಗಳ ಹಾವಳಿಯ ಕುರಿತು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಂದ ದೂರುಗಳು ಕೇಳಿ ಬರುತ್ತಿವ ನಿಟ್ಟಿನಲ್ಲಿ ಈ ಬಾರಿ ಈ ಬಜೆಟನ್ನು ವಿಸ್ತರಿಸಿದೆ.
ಬಿಡಾಡಿ ದನಗಳ ಹಾವಳಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆ ನಾಶದಿಂದ ರೋಸಿ ಹೋದ ಜನರು ಎಲ್ಲ ದನಗಳನ್ನು ಸರಕಾರಿ ಶಾಲೆಯಲ್ಲಿ ಕೂಡಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಯೋಗಿ ಸರಕಾರವು ಗೋವುಗಳನ್ನು ನಿರ್ವಹಿಸುವಲ್ಲಿ ಈ ವರ್ಷವಾದರೂ ಸಫಲವಾಗಬಹುದೇ ಎಂಬುದನ್ನು ಕಾದು ನೋಡಬೇಕಿದೆ.













