ಕೊಲೊಂಬೊ ವಿಮಾನ ನಿಲ್ದಾಣದಲ್ಲಿ ಪೈಪ್ ಬಾಂಬು ಪತ್ತೆ

0
1544

ಕೊಲೊಂಬೊ,ಎ.22: ಶ್ರೀಲಂಕದಲ್ಲಿ 215 ಮಂದಿಯ ಸಾವಿಗೆ ಕಾರಣವಾಗಿದ್ದ ಸ್ಫೋಟ ಸರಣಿಯ ಬೆನ್ನಿಗೆ ಕೊಲೊಂಬೊದ ಪ್ರಧಾನ ವಿಮಾನ ನಿಲ್ದಾಣದಲ್ಲಿ ರವಿವಾರ ರಾತ್ರೆ ಪೈಪ್ ಬಾಂಬು ಪತ್ತೆಯಾಗಿದ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. ವಿಮಾನ ನಿಲ್ದಾಣದ ಪ್ರಧಾನ ಟರ್ಮಿನಲ್‍ಗೆ ಹೋಗು ದಾರಿಯಲ್ಲಿ ಪೈಪ್ ಬಾಂಬು ಇರಿಸಲಾಗಿತ್ತು. ಇದು ನಾಡಬಾಂಬು ಎಂದು ಪೊಲೀಸರು ತಿಳಿಸಿದ್ದಾರೆ. ಸರಣಿ ಸ್ಫೋಟ ನಡೆದ ಬಳಿಕ ಕೊಲೊಂಬೊ ವಿಮಾನ ನಿಲ್ದಾಣ ಅತೀವ ಭದ್ರತೆಯೊಂದಿಗೆ ಕಾರ್ಯನಿರ್ವಹಿಸಿಸತ್ತು. ಈ ಮಧ್ಯೆ ನಡೆಸಲಾದ ತಪಾಸಣೆಯಲ್ಲಿ ಬಾಂಬು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.