ಭೋಪಾಲ,ಎ.2: ಆರೆಸ್ಸೆಸ್ ಕಚೇರಿಯ ಸುರಕ್ಷೆಯನ್ನು ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರ ಹಿಂಪಡೆದಿದೆ. ಲೋಕಸಭಾ ಚುನಾವಣೆ ನಡೆಯುವ ವೇಳೆಯೇ ಮುಖ್ಯಮಂತ್ರಿ ಕಮಲ್ನಾಥ್ ಆರೆಸ್ಸೆಸ್ ಕಚೇರಿಯ ಸುರಕ್ಷೆಯನ್ನು ಹಿಂಪಡೆದುಕೊಂದ್ದಾರೆ.
ಆರೆಸ್ಸೆಸ್ ಭೋಪಾಲ ಕಚೇರಿಯ ಸುರಕ್ಷೆಯನ್ನು ಕಮಲ್ನಾಥ್ ಸರಕಾರ ತೆರವುಗೊಳಿಸಿದ್ದರೂ ಕಾಂಗ್ರೆಸ್ನ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ತನ್ನ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಆರೆಸ್ಸೆಸ್ ಕಚೇರಿಯ ಸುರಕ್ಷೆಯನ್ನು ಹಿಂಪಡೆದ ಕ್ರಮವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ಕಾರ್ಯಕರ್ತರಿಗೆ ಏನಾದರೂ ಸಂಭವಿಸಿದರೆ ಸರಕಾರವೇ ಹೊಣೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಮಧ್ಯಪ್ರದೇಶ, ಛತ್ತೀಸ್ಗಡ ರಾಜ್ಯಗಳ ಜಂಟಿ ಆರೆಸ್ಸೆಸ್ ಕಚೇರಿ ಭೋಪಾಲದ ಇ-2 ಕಾಲನಿಯಲ್ಲಿದೆ. ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಆರೆಸ್ಸೆಸ್ ಕಚೇರಿಯ ಭದ್ರತೆಯನ್ನು ಹೆಚ್ಚಳಗೊಳಿಸಿತ್ತು.












