ಪತ್ನಿಯ ಪ್ರೀತಿಯನ್ನು ಪರೀಕ್ಷಿಸಲು ರಸ್ತೆಯ ನಡುವೆ ನಿಂತ ಪತಿ ವಾಹನದಡಿಗೆ ಬಿದ್ದು ದಾರುಣ ಸಾವು

0
2714

ಬೀಜಿಂಗ್,ಮಾ.26: ಮಧ್ಯರಾತ್ರೆ ನಿಬಿಡ ವಾಹನ ಸಂಚರಿಸುವ ರಸ್ತೆಯ ಮಧ್ಯೆ ನಿಂತ ವ್ಯಕ್ತಿಯೊಬ್ಬ ವಾಹನದಡಿಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ. ಮದ್ಯ ಪಾನಿಯಾಗಿದ್ದ ಈತ ತನ್ನ ಪತ್ನಿಯ ಪ್ರೀತಿಯನ್ನು ಪರೀಕ್ಷಿಸಲು ರಸ್ತೆಯ ಮಧ್ಯ ನಿಂತು ಫೋಸು ಕೊಟ್ಟಿದ್ದ. ಚೀನದ ಲೂಸಿಯಿಯಲ್ಲಿ ಘಟನೆ ನಡೆದಿದ್ದು, ಪಾನ್ ಮತ್ತು ಪತ್ನಿ ಶಾವೊರ ನಡುವೆ ಜಗಳವಾಗಿತ್ತು. ನಂತರ ಪಾನ್ ಪತ್ನಿಯನ್ನು ಎಳೆದು ಕೊಂಡು ನಡು ರಸ್ತೆಗೆ ಬಂದಿದ್ದಾನೆ. ಪತ್ನಿ ಹಲವು ಸಲ ಈತನನ್ನು ನಡುರಸ್ತೆಯಿಂದ ಬದಿಗೆ ಎಳೆಯಲು ಯತ್ನಿಸಿದ್ದಾಳೆ. ಆದರೆ ಆತ ಪತ್ನಿಯನ್ನೂ ರಸ್ತೆಯ ಮಧ್ಯಕ್ಕೆ ಎಳೆಯುತ್ತಿದ್ದ. ಕೊನೆಗೆ ಮಹಿಳೆ ಆತನನ್ನು ಬಿಟ್ಟು ರಸ್ತೆ ಬದಿಗೆ ಹೋಗಿದ್ದಾಳೆ. ಹಲವು ವಾಹನಗಳು ಈತನನ್ನು ಬದಿಗೆ ಸರಿಸಿ ದಾಟಿ ಮುಂದೆ ಹೋಗಿದ್ದವು. ಆದರೆ ಅತಿವೇಗದಿಂದ ಬಂದ ಕಾರೊಂದು ಈತನಿಗೆ ಢಿಕ್ಕಿಹೊಡೆಯುತ್ತಿರುವುದು ಟ್ರಾಫಿಕ್ ಕ್ಯಾಮರದಲ್ಲಿ ದಾಖಲಾಗಿದೆ.

ಗಂಭೀರ ಗಾಯಗೊಂಡ ಈತನನ್ನು ಆಸ್ಪತ್ರೆಗೆ ದಾಖಲಾಗಿಸಿದರೂ ಬದುಕಿ ಉಳಿಯಲಿಲ್ಲ.ಪತ್ನಿಯ ಪ್ರೀತಿಯನ್ನು ಪರೀಕ್ಷಿಸುತ್ತಿದ್ದೆ ಎಂದು ಈತ ಸಾಯುವ ಮೊದಲು ಹೇಳಿಕೆ ನೀಡಿದ್ದಾನೆ. ರಸ್ತೆಯಿಂದ ಬದಿಗೆ ಎಳೆದು ಹಾಕಲು ಯಶಸ್ವಿಯಾದರೆ ಪತ್ನಿ ನಿಜವಾಗಿ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಶ್ವಾಸ ನನ್ನದಾಗಿತ್ತು ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ. ಗಂಭೀರ ಗಾಯಗೊಂಡ ಈತನ ಸೊಂಟ ಮುರಿದಿತ್ತು. ತಲೆಗೆ ಗಂಭೀರ ಗಾಯವಾಗಿತ್ತು. ಹೇಳಿಕೆ ನೀಡಿದ ನಂತರ ಆಸ್ಪತ್ರೆಯಲ್ಲಿ ಈತ ಕೊನೆಯುಸಿರೆಳೆದನು.