ಸನ್ಮಾರ್ಗ ವಾರ್ತೆ
ವಾಷಿಂಗ್ಟನ್, ಮೇ 9: ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ರ ಪತ್ರಿಕಾ ಕಾರ್ಯದರ್ಶಿಗೆ ಕೊರೊನಾ ತಗಲಿದೆ. ಕ್ಯಾಟಿ ಮಿಲ್ಲರ್ ರಿಗೆ ಕೊರೊನಾ ವೈರಸ್ ತಗಲಿದ್ದು ಇವರು ಉಪಾಧ್ಯಕ್ಷರ ಪತ್ರಿಕಾ ಕಾರ್ಯದರ್ಶಿಯಾಗಿ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕ್ಯಾಟಿಗೆ ಕೊರೊನಾ ಬಂದಿರುವುದನ್ನು ದೃಢಪಡಿಸಿದ್ದು ಎರಡು ದಿನಗಳಲ್ಲಿ ಕೊರೊನಾ ಸೋಂಕು ದೃಢೀಕರಣವಾಗಿರುವ ವೈಟ್ ಹೌಸ್‍ನ ಎರಡನೇ ಉದ್ಯೋಗಿ ಇವರು ಆಗಿದ್ದಾರೆ. ಕ್ಯಾಟಿ ಮಿಲ್ಲರ್ ಕೊರೊನಾಕ್ಕೆ ಸಂಬಂಧಿಸಿದ ಹಲವು ಉನ್ನತ ಸಭೆಯಲ್ಲಿ ಭಾಗವಹಿಸಿದ್ದರು. ವೈಟ್ ಹೌಸ್‍ನ ಹಿರಿಯ ನೀತಿ ಸಲಹೆಗಾರ ಸ್ಟೀಫನ್ ಮಿಲ್ಲರ್ ಕ್ಯಾಟಿಯ ಪತಿಯಾಗಿದ್ದಾರೆ.
ಗುರುವಾರ ವೈಟ್ ಹೌಸ್‍ನಲ್ಲಿ ಸೈನಿಕರೊಬ್ಬರು ಕರ್ತವ್ಯದಲ್ಲಿದ್ದರು. ಅವರಿಗೂ ಕೊರೊನಾ ರೋಗ ದೃಢಪಟ್ಟಿದೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












