ಕಾರ್ಯಕ್ರಮದ ಅರ್ಧದಿಂದಲೇ ಜನರು ಎದ್ದು ಹೋಗಬಾರದೆಂದು ಎಐಡಿಎಂಕೆಯಿಂದ ಮಾನವ ಸಂಕಲೆ!

0
706

ಚೆನ್ನೈ,ಎ.3: ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಭಾಷಣ ಮುಗಿಸುವ ಮೊದಲು ಚುನಾವಣಾ ಪ್ರಚಾರ ಸಭೆಯಿಂದ ಹೊರಟು ಹೋಗಲು ಸಿದ್ಧರಾದ ಮಹಿಳೆಯರ ಮುಂತಾದವರನ್ನು ತಡೆಯುವ ನಿಟ್ಟಿನಲ್ಲಿ ಮುಡಿಂಜಿಟ್ ಪೋಗಮ್ಮಾ( ಮುಗಿದ ಮೇಲೆ ಹೋಗಿ ಅಮ್ಮಂದಿರೇ) ಎಂದು ಹೇಳುತ್ತಾ ಪ್ರಾದೇಶಿಕ ಪಾರ್ಟಿಯ ಪದಾಧಿಕಾರಿಗಳು ಮಾನವ ಸಂಕಲೆ ಮೂಲಕ ಘಟನೆ ನಡೆದಿದ್ದು ಇದರ ವೀಡಿಯೊ ವೈರಲ್ ಆಗಿದೆ.

ಶಿವಗಂಗಾ ಲೋಕಸಭಾ ಕ್ಷೇತ್ರದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜಾರಿಗಾಗಿ ಮಾನಾಮಧುರೆಯಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿಯ ಭಾಷಣ ಮುಗಿಯುವವರೆ ಮಾನವ ಸಂಕಲೆ ರಚಿಸಿ ಜನರನ್ನು ತಡೆಹಿಡಿಯಲಾಗಿದೆ. ಹಣ,ಬಾಡೂಟ ನೀಡಿ ರಾಜಕೀಯ ಪಾರ್ಟಿಗಳು ಹಲವು ಕಡೆ ಜನರನ್ನು ಕಾರ್ಯಕ್ರಮಕ್ಕೆ ಕರೆತರುತ್ತಿವೆ. ನಾಯಕರ ಭಾಷಣ ಕೇಳಲು ಇವರಿಗೆ ಆಸಕ್ತಿಯಿಲ್ಲ. ಸುಡು ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ಜನರು ಒಬ್ಬೊಬ್ಬರೇ ಹೋಗುತ್ತಿರುವುದು ಕಂಡು ಬಂದಾಗ ಪ್ರಾದೇಶಿಕ ಪದಾಧಿಕಾರಿಗಳು ಮಾನವ ಸಂಕಲೆ ನಿರ್ಮಿಸಿದ್ದಾರೆ.

ಎಡಪ್ಪಾಡಿ ಪಳನಿ ಸ್ವಾಮಿಯ ಪ್ರಚಾರ ಕಾರ್ಯಕ್ರಮಕ್ಕೆ ಜನರು ಬರುವುದಿಲ್ಲ ಎಂದು ಈಗಾಗಲೇ ವರದಿಯಾಗಿದೆ. ಹೆಚ್ಚು ಜನರನ್ನು ಸಭೆಗೆ ಕರೆತರಲು ಪದಾಧಿಕಾರಿಗಳು ವಿಶೇಷ ಗಮನಹರಿಸುತ್ತಿದ್ದಾರೆ.