ಹೊಸದಿಲ್ಲಿ,ಮಾ.13: ಪಾಟಿದಾರ್ ಮೀಸಲಾತಿ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ಗೆ ಸೇರಿದ್ದಾರೆ. ಮಂಗಳವಾರ ಗುಜರಾತಿನಲ್ಲಿ ನಡೆದ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ಗಾಂಧಿ, ಸೋನಿಯಾ ಗಾಂಧಿಯವರ ಸಮಕ್ಷಮದಲ್ಲಿ ಹಾರ್ದಿಕ್ ಪಟೇಲ್ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.ಲೋಕಸಬಾ ಚುನಾವಣೆಯಲ್ಲಿ ಗುಜರಾತಿನ ಜಾಮ್ ನಗರ ಕ್ಷೇತ್ರದಿಂದ ಹಾರ್ದಿಕ್ ಸ್ಪರ್ಧಿಸಲಿದ್ದಾರೆ.
2016ರಲ್ಲಿ ಬಿಜೆಪಿ ತನಗೆ 1200 ಕೋಟಿ ರೂಪಾಯಿ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಆಫರ್ ಮಾಡಿತ್ತು ಎಂದು ಮಂಗಳವಾರ ನ್ಯಾಶನಲ್ ಹೆರಾಲ್ಡ್ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ಪಟೇಲ್ ಆರೋಪಿಸಿದ್ದರು. ಸೂರತ್ ಜೈಲಿನಲ್ಲಿದ್ದ ಸಮಯದಲ್ಲಿ ಗುಜಾರಾತಿನಲ್ಲಿ ನರೇಂದ್ರ ಮೋದಿಯವರ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ಕೈಲಾಶ್ನಾಥ್ ಜೈಲಿಗೆ ಬಂದು ಕೊಡುಗೆ ಪ್ರಸ್ತಾಪಿಸಿದ್ದರು.
ಮುಖ್ಯಮಂತ್ರಿಯಾಗಿದ್ದ ಆನಂದಿ ಬೆನ್ ಪಟೇಲಿಗಾಗಿ ಕೆ.ಕೆ. ಎಂದು ಹೇಳುವ ಕೆ.ಕೈಲಾಶ್ನಾಥ್ ಬಂದಿದ್ದರು. ಮೀಸಲಾತಿ ಹೋರಾಟವನ್ನು ನಿಲ್ಲಿಸಬೇಕು ಎಂದು ಬಿಜೆಪಿ ಹೇಳಿತ್ತು. ತಾನು ಅದನ್ನು ಆಗಲೇ ತಿರಸ್ಕರಿಸಿದ್ದೆ. ಜೈಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೆ ಇವೆಲ್ಲ ಬಹಿರಂಗವಾಗಲಿದೆ ಎಂದು ಹಾರ್ದಿಕ್ ಪಟೇಲ್ ಹೇಳಿದರು.












