ಪುಲ್ವಾಮ,ಮಾ.14: ಜಮ್ಮು ಕಾಶ್ಮೀರದ ಪುಲ್ವಾದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಓರ್ವ ನಾಗರಿಕ ಹತ್ಯೆಯಾಗಿದ್ದಾನೆ. ಪುಲ್ವಾಮದ ಪಂಗ್ಲಿನ ಮೈನ್ ರೋಡಿನ ಸಮೀಪದಲ್ಲಿ ಘಟನೆ ನಡೆದಿದೆ. ಮುಹಮ್ಮದ್ ಯೂಸುಫ್ ನಾಯ್ಕ್ ರ ಪುತ್ರ ಶೌಕತ್ ಅಹ್ಮದ್ ನಾಯ್ಕ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಗುಂಡು ಹಾರಾಟ ಯಾವ ಪರಿಸ್ಥಿತಿಯಲ್ಲಿ ನಡೆಯಿತು ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.












