ಜಮಾಅತೆ ಇಸ್ಲಾಮೀ ಹಿಂದ್ ನೂತನ ರಾಷ್ಟ್ರಾಧ್ಯಕ್ಷರಾಗಿ ಸೈಯದ್ ಸಾದತುಲ್ಲಾ ಹುಸೈನಿ ಆಯ್ಕೆ

0
983

ಹೊಸದಿಲ್ಲಿ: ಜಮಾಅತೆ ಇಸ್ಲಾಮಿ ಹಿಂದ್‌ನ ನೂತನ ರಾಷ್ಟ್ರಾಧ್ಯಕ್ಷರಾಗಿ ಸೈಯದ್ ಸಾದಾತುಲ್ಲಾ ಹುಸೈನಿ ಆಯ್ಕೆಯಾಗಿದ್ದಾರೆ. ಸಾದತುಲ್ಲಾ ಹುಸೈನಿಯವರನ್ನು ಏಪ್ರಿಲ್ 2019 ರಿಂದ ಮಾರ್ಚ್ 2023 ವರೆಗೆ 4 ವರ್ಷದ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಸೈಯದ್ ಸಾದಾತುಲ್ಲಾ ಹುಸೈನಿಯವರು ಸತತ ಎರಡು ಬಾರಿ (1999 ರಿಂದ 2003 ರವರೆಗೂ) ಜಮಾತ್‌ನ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್ಐಒ) ಇದರ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು JIH ನ ಅಧ್ಯಯನ ಮತ್ತು ಸಂಶೋಧನಾ ಇಲಾಖೆಯ ನಿರ್ದೇಶಕರಾಗಿ ನೇತೃತ್ವ ವಹಿಸಿದ್ದರು. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಜನಿಸಿದ ಇವರು ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕ ಇಂಜಿನಿಯರಿಂಗ್ ಪದವಿ ಪದವಿ ಪಡೆದಿದ್ದಾರೆ. ಹೈದರಾಬಾದ್, ಬೆಂಗಳೂರು, ದೆಹಲಿ ಮತ್ತು ಅಲಿಗಢದ ಅನೇಕ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಮಂಡಳಿಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.‌ ಹತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿರುವ ಇವರ ಲೇಖನಗಳು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟಗೊಂಡಿವೆ.1973 ರಲ್ಲಿ ಜನಿಸಿದ ಅವರು ಜಮಾತ್-ಇ-ಇಸ್ಲಾಮಿ ಹಿಂದ್‌ನ ಕಿರಿಯ ರಾಷ್ಟ್ರಾಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ.
2019- 2023 ಸಾಲಿಗೆ ಆಯ್ಕೆಯಾದ ಜಮಾಅತೆ ಇಸ್ಲಾಮಿ ಹಿಂದ್ ಕೇಂದ್ರ ಸಲಹಾ ಸಮಿತಿ ನೂತನ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ.
1. ಸಯ್ಯದ್ ಜಲಾಲುದ್ದೀನ್ ಉಮರಿ
2. ಟಿ.ಆರಿಫಲಿ
3. ನುಸ್ರತ್ ಅಲಿ
4. ಮುಹಮ್ಮದ್ ಜ’ಆಫರ್
5. ಮುಹಮ್ಮದ್ ರಫ್ ಅತ್
6. ಇಂಜಿನಿಯರ್ ಮೊಹಮ್ಮದ್ ಸಲೀಂ
7. ಎಸ್.ಕ್ಯೂಆರ್ ಇಲ್ಯಾಸ್
8. ಎಸ್. ಅಮೀನುಲ್ ಹಸನ್
9. ಡಾ.ಹಸನ್ ರಝಾ
10. ಮುಜ್ತಬಾ ಫಾರೂಕ್
11. ಮುಹಮ್ಮದ್ ಇಕ್ಬಾಲ್ ಮುಲ್ಲಾ
12. ಅಬ್ದುಲ್ ಜಬ್ಬಾರ್ ಸಿದ್ದೀಕಿ.
13. ಇಜಾಝ್ ಅಹ್ಮದ್ ಅಸ್ಲಂ
14. ಎಚ್. ಅಬ್ದುರ್ರಖೀಬ್
15. ಮಲಿಕ್ ಮೊಹಿತಿಶಮ್ ಖಾನ್
16. ಯೂಸುಫ್ ಇಸ್ಲಾಹಿ
17. ರಝ್ವಿ ಇಸ್ಲಾಮ್ ನದ್ವಿ
18.ಡಾ. ಅಬ್ದುಲ್ ಸಲಾಮ್ ಅಹ್ಮದ್
19. ಅತಿಯಾ ಸಿದ್ದೀಖಾ
20. ವಲಿಯುಲ್ಲಾ ಸಯೀದಿ ಫಲಾಹಿ
21. ತೌಫೀಕ್ ಅಸ್ಲಂ ಖಾನ್
22. ಪರ್ವೇಝ್ ರೆಹಮಾನಿ
23. ರಫೀಕ್ ಖಾಸಿಮಿ
24. ಡಾ. ಸಲೀಮ್ ಖಾನ್