ಹೃದಯ ಶಸ್ತ್ರಚಿಕಿತ್ಸೆಗೆ ಮಂಗಳೂರಿನಿಂದ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ಕರೆದೊಯ್ಯಲಿರುವ 15 ದಿನಗಳ ಮಗು- ಸಂಪೂರ್ಣ ಖರ್ಚು ಕೇರಳ ಸರಕಾರದಿಂದ

0
1663

ಕಲ್ಲಿಕೋಟೆ,ಎ.16: ಹೃದಯ ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿನಿಂದ ಟ್ರಾಫಿಕ್ ಸಿನೆಮಾದ ರೀತಿಯಲ್ಲಿ ಕರೆದುಕೊಂಡು ಹೋಗುವ ಹದಿನೈದು ದಿವಸಗಳ ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕೇರಳ ಸರಕಾರ ಭರಿಸಲಿದೆ. ಶಸ್ತ್ರಕ್ರಿಯೆ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ನಡೆಯಲಿದ್ದು ಇದಕ್ಕಾಗಿ ಮಗುವನ್ನು ಅಮೃತಾ ಆಸ್ಪತ್ರೆ ಕರೆತರಲಾಗುತ್ತಿದೆ. ಇದೇ ವೇಳೆ ಅಂಬ್ಯುಲೆನ್ಸ್‌ನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜನರಲ್ಲಿ ಚೈಲ್ಡ್ ಪ್ರೊಟೆಕ್ಷನ್ ಟೀಂ ವಿನಂತಿಸಿಕೊಂಡಿದೆ. ಬೆಳಗ್ಗೆ ಹತ್ತೂವರೆ ಗಂಟೆಗೆ ಕೆಎಲ್-60-ಜೆ.7739 ನಂಬರಿನ ಆಂಬ್ಯುಲೆನ್ಸ್ ಮಂಗಳೂರಿನಿಂದ ಹೊರಟಿದೆ.

ಮಗುವನ್ನು ಕರೆದುಕೊಂಡು ಬರುವ ವಿವರ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮಂಗಳೂರಿನಿಂದ 620 ಕಿಲೋಮೀಟರ್ ದೂರದ ತಿರುವನಂತಪುರಂಗೆ ಪ್ರಯಾಣಿಸಲು ಕನಿಷ್ಠ 12 ಗಂಟೆ ಬೇಕಾಗಿದೆ. ಆದ್ದರಿಂದ ಸರಕಾರ ನೆರವಿಗೆ ಬಂದಿದ್ದು ಆರೋಗ್ಯ ಸಚಿವೆ ಅಮೃತಾ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತಾಡಿದ್ದಾರೆ. ಸರಕಾರದ ಹೃದಯ ಯೋಜನೆಯಡಿಯಲ್ಲಿ ಮಗುವಿನ ಶಸ್ತ್ರಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಅಮೃತಾ ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಶಸ್ತ್ರಕ್ರಿಯೆ ನಡೆಸಲಾಗುವುದು. ಮೊದಲು ತಿರುವನಂತಪುರಂನ ಶ್ರೀ ಚಿತ್ರಾ ಆಸ್ಪತ್ರೆಗೆ ಮಗುವನ್ನು ದಾಖಲಿಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ತೀರ್ಮಾನವನ್ನು ಬದಲಾಯಿಸಿ ಅಮೃತಾ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಲಾಗಿದೆ.