ಅಸ್ಸಾಂ,ಎ.9: ಬೀಫ್ ಮಾರಾಟ ನಡೆಸುತ್ತಿದ್ದಾನೆ ಎಂದು ಆರೋಪಿಸಿಅಸ್ಸಾಂನಲ್ಲಿ ವದ್ಧರೊಬ್ಬರಿಗೆ ಜನರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದೆ. ಬಿಶ್ವನಾಥ್ ಚರಿಯಾಲ್‍ನ ಶೌಕತ್ ಅಲಿ ಎಂಬವರಿಗೆ ಸ್ಥಳೀಯರ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿತು. ಘಟನೆಯ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲಿ ಪ್ರಚಾರ ಮಾಡಲಾಗಿದೆ. ಶೌಕತ್ ಅಲಿಯವರ ನಾಗರಿಕತೆಯನ್ನು ಪ್ರಶ್ನಿಸುವುದು ಮತ್ತು ಹಂದಿ ಮಾಂಸ ತಿನ್ನಲು ಬಲವಂತಪಡಿಸುವುದು ವೀಡಿಯೊದಲ್ಲಿ ಕಾಣಿಸುತ್ತಿದೆ.
ಘಟನೆಗೆ ಸಂಬಂಧಿಸಿ ಪೊಲೀಸರು ಎರಡು ಎಫ್‍ಐಆರ್ ದಾಖಲಿಸಲಾಯಿತು ಎಂದು ಅಸ್ಸಾಂ ಪೊಲೀಸರು ತಿಳಿಸಿದರು. ತನಿಖೆ ಆರಂಭವಾಗಿದ್ದು ವೀಡಿಯೊದಲ್ಲಿ ಕಂಡು ಬಂದ ಜನರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಶೌಕತ್‍ಅಲಿ ಕಳೆದ 35 ವರ್ಷಗಳಿಂದ ಬಿಶ್ವನಾಥ್‍ನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಬಾಂಗ್ಲಾದೇಶದ ಪ್ರಜೆಯಲ್ಲವೇ? ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಹೊಡೆಯುತ್ತಾ ಜನರ ಗುಂಪು ಶೌಕತ್ ಆಲಿಯವರನ್ನು ಕೇಳುತ್ತಿದೆ. ವೃದ್ಧನನ್ನು ಬೆದರಿಸಿ ಹಂದಿ ಮಾಂಸ ತಿನ್ನಲು ನಿರ್ಬಂಧಿಸುತ್ತಿದೆ. ತೀವ್ರ ಗಾಯಗೊಂಡಿರುವ ಶೌಕತ್ ಅಲಿಯವರನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು.












