ನವದೆಹಲಿ,ಎ,21: ಜಮಾಅತೆ ಇಸ್ಲಾಮಿ ಹಿಂದ್ನ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸದಾತುಲ್ಲಾ ಹುಸೈನಿಯವರು ಭಾನುವಾರ ಶ್ರೀಲಂಕಾದಲ್ಲಿ ನಡೆದ ಮಾರಣಾಂತಿಕ ಸರಣಿ ಬಾಂಬ್ ಸ್ಫೋಟಗಳನ್ನು ತೀವ್ರವಾಗಿ ಖಂಡಿಸಿದ್ದಾರೆ ಮತ್ತು ಮಾನವೀಯತೆಯ ವಿರುದ್ಧ ಕ್ಷಮಿಸಲಾರದ ಹೇಯ್ಯ ಕೃತ್ಯ ಎಂದು ಅವರು ಕರೆದಿದ್ದಾರೆ. ಸರಣಿ ಸ್ಫೋಟದಲ್ಲಿ ಮಡಿದ 300 ಕ್ಕಿಂತಲೂ ಹೆಚ್ಚು ಜನರಿಗೆ ಸಂತಾಪ ಸೂಚಿಸಿ ಪ್ರಾರ್ಥಿಸಿದ ಅವರು ಮೃತರ ಕುಟುಂಬಗಳಿಗೆ ಸಹಾನುಭೂತಿಯನ್ನು ವಿಸ್ತರಿಸಿದರು. ಸ್ಫೋಟದಲ್ಲಿ ಗಾಯಗೊಂಡ 500 ಕ್ಕಿಂತಲೂ ಹೆಚ್ಚು ಜನರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ ಅವರು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದರು.
ನಮ್ಮ ನೆರೆಯ ದೇಶ ಶ್ರೀಲಂಕಾ ಬಹಳ ವರ್ಷಗಳ ಕಾಲ ಆಂತರಿಕ ಕಲಹ, ಹಿಂಸೆ ಮತ್ತು ಹತ್ಯೆಗಳ ಮೂಲಕ ಮೆಟ್ಟಿ ನಿಂತು ಶಾಂತಿಯುತ ವಾತಾವರಣವನ್ನು ನಿರ್ಮಿಸಿಕೊಂಡಿತ್ತು, ದೇಶದಲ್ಲಿ ಸಂಪೂರ್ಣ ಶಾಂತಿ ಇದ್ದಾಗ, ಈ ಹಿಂಸಾತ್ಮಕ ಘಟನೆ ನಡೆಯಿತು ಮತ್ತು ನೂರಾರು ಜನರು ಕೊಲ್ಲಲ್ಪಟ್ಟರು ಎಂಬುದು ನಿಜಕ್ಕೂ ಸಹಿಸಲರಾದ ಸಂದಿಗ್ಧತೆಯನ್ನು ನಿರ್ಮಿಸಿದ್ದು. ಇದು ಅತ್ಯಂತ ಖಂಡನೀಯ ದುರಂತವಾಗಿದೆ ಎಂದು ಸೈಯದ್ ಸದಾತುಲ್ಲಾ ಹುಸೈನಿಯವರು ನುಡಿದರು.
ವಿವಿಧ ದೇಶಗಳಲ್ಲಿ ಮನುಷ್ಯ ಮನುಷ್ಯರ ನಡುವೆ ನಡೆಯುತ್ತಿರುವ ನ್ಯಾಯಸಮ್ಮತವಲ್ಲದ ಕೊಲೆಗಳ ಸರಣಿ ನಿಲ್ಲದೇ ಇದ್ದಲ್ಲಿ ಮನುಕುಲವನ್ನು ಮತ್ತಷ್ಟು ಕೀಳ್ಮಟ್ಟಕ್ಕೆ ಇಳಿಯುವುದನ್ನು ತಡೆಯಲು ಅಸಾಧ್ಯವೆನ್ನುವ ದಿನಗಳು ಬರಬಹುದು. ಶ್ರೀಲಂಕಾದ ಸರಕಾರವು ಈ ಸರಣಿ ಸ್ಫೋಟಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕಾದ ಮತ್ತು ಈ ಕೃತ್ಯದ ಹಿಂದಿರುವ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಲು ತರುವಲ್ಲಿ ಯಾವುದೇ ಪ್ರಯತ್ನದ ಪಟ್ಟನ್ನು ಬಿಡುವುದಿಲ್ಲ ಎಂಬ ಭರವಸೆ ನಮಗಿದೆ. ದೇಶದಲ್ಲಿ ಮತ್ತೆ ಶಾಂತಿಯನ್ನು ಅಸ್ಥಿರಗೊಳಿಸಲು ಯಾರೂ ಶ್ರಮಿಸಲು ಧೈರ್ಯ ತೋರದಂತಹ ಶಿಕ್ಷೆಗೆ ಅಪರಾಧಿಗಳನ್ನು ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.












