ರಮಝಾನ್: ಮತದಾನ ಸಮಯ ಬದಲಾವಣೆ ಪರಿಶೀಲಿಸಬೇಕು- ಸುಪ್ರೀಂಕೋರ್ಟು

0
645

ಹೊಸದಿಲ್ಲಿ,ಮೇ 2: ರಮಝಾನಿನಲ್ಲಿ ಮತದಾನ ಸಮಯವನ್ನು ಐದು ಗಂಟೆಯವರೆಗೆ ಮಾಡಿ ಮರುಪರಿಶೀಲನೆ ನಡೆಸುವ ವಿಚಾರವನ್ನು ಪರಿಶೀಲಿಸಬೇಕೆಂದು ಸುಪ್ರೀಂಕೋರ್ಟು ಆದೇಶಿಸಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟು ಆದೇಶ ನೀಡಿದ್ದು ಈಗಿನ ಸಮಯ ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಆರು ಗಂಟೆಯವರೆಗಿದೆ. ಇದು ಐದು ಗಂಟೆಯಾಗಿ ಮರು ನಿಗದಿಪಡಿಸಬೇಕೇಂದು ಸುಪ್ರೀಂಕೋಟು ಚುನಾವಣಾ ಆಯೋಗಕ್ಕೆ ತಿಳಿಸಿದೆ. ಇಬ್ಬರು ವಕೀಲರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟು ಈ ಆದೇಶ ನೀಡಿದ್ದು ಏಳು ಹಂತದ ಚುನಾವಣೆಯಲ್ಲಿ ಐದು, ಆರು , ಏಳನೆ ಹಂತಗಳ ಚುನಾವಣೆ ರಮಝಾನ್‍ನ ಸಮಯದಲ್ಲಿ ನಡೆಯುತ್ತಿವೆ.