ಲಕ್ನೊ,ಎ.29: ಮುಹಮ್ಮದ್ ಶಮಿಯ ಮನೆಗೆ ದಾಳಿ ಮಾಡಿದ ಆರೋಪದಲ್ಲಿ ಪತ್ನಿ ಹಸೀನಾ ಜಹಾನ್‍ರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಪೊಲೀಸರು ಶಮಿಯ ಪತ್ನಿಯನ್ನು ಬಂಧಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು.
ಶಹಾಸ್‍ಪುರಿಯ ಅಲಿನಗರ ಗ್ರಾಮದ ಶಮಿಯ ಮನೆಗೆ ಬಂದು ಹಸೀನಾ ಜಹಾನ್ ದಾಲಿ ನಡೆಸಿದ್ದಾರೆ ಎಂದು ಪೊಲೀಸ್ ಕೇಸು ದಾಖಲಾಗಿತ್ತು. ಶಮಿಯ ತಾಯಿ ಹಸೀನಾರನ್ನು ತಡೆಯಲು ಶ್ರಮಿಸಿದರೂ ವಿಫಲರಾದರು. ನಂತರ ಪೊಲೀಸರು ಬಂದು ಹಸೀನಾ ಜಹಾನ್‍ರನ್ನು ಕಸ್ಟಡಿಗೆ ಪಡೆದರು. ತನ್ನ ಪತಿಯ ಮನೆಗೆ ಬರುವ ಹಕ್ಕು ತನಗಿದೆ ಎಂದು ಹಸೀನಾ ಜಹಾನ್ ಹೇಳಿದರು. ಆದರೆ ಶಮಿಯ ತಾಯಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ಅವರನ್ನು ಪೊಲೀಸರು ಬೆಂಬಲಿಸಿದರು ಎಂದು ಹಸೀನಾ ಜಹಾನ್ ಆರೋಪಿಸಿದರು. ಕಳೆದ ಮಾರ್ಚ್ ತಿಂಗಳಲ್ಲಿ ಶಮಿಯ ವಿರುದ್ಧ ಐಪಿಸಿ ಸೆಕ್ಷನ್ 498(ಎ) ಅನ್ವಯ ವರದಕ್ಷಿಣೆ ಹಿಂಸೆ, 354(ಎ)ಯಡಿಯಲ್ಲಿ ಲೈಂಗಿಕ ಕಿರುಕುಳ ಕೇಸು ದಾಖಲಾಗಿತ್ತು.












