ಜೆದ್ದ,ಮಾ. 13: ಸೌದಿ ಅರೇಬಿಯದ ಹಜ್ ಮತ್ತು ಉಮ್ರ ಸಚಿವಾಲಯ ಇಲೆಕ್ಟ್ರಾನಿಕ್ ವೀಸಾಗಳನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದು ಯಾತ್ರಾರ್ಥಿಗಳು ವೀಸಾಕ್ಕೆ ಆನ್ಲೈನ್ ಮೂಲಕ ಅರ್ಜಿ ಹಾಕಿದರೆ ಕೆಲವು ನಿಮಿಷಗಳಲ್ಲಿ ವೀಸಾ ಅವರ ಕೈ ಸೇರಲಿದೆ ಎಂದು ತಿಳಿಸಿದೆ.
ಸೌದಿ ಅರಬೇತರರಿಗೆ ವಿವಿಧ ರೀತಿಯ ಸೇವಾ ಪ್ಯಾಕೇಜ್ಗಳನ್ನು ಹಜ್ ಪೋರ್ಟಲ್ನಲ್ಲಿ ಒದಗಿಸಲಾಗುವುದು. ಪೋರ್ಟಲ್ನಲ್ಲಿರುವ ವಿವರಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿ ಸರಿಯಾದ ವಿವರಗಳನ್ನು ಭರ್ತಿಮಾಡಿದರೆ ಅವರಿಗೆ ವೀಸಾ ಕೂಡಲೇ ಸಿದ್ಧವಾಗುತ್ತದೆ ಎಂದು ಹಜ್ ಆ್ಯಂಡ್ ಉಮ್ರದ ಇಲೆಕ್ಟ್ರಾನಿಕ್ ವಿಭಾಗದ ಜನರಲ್ ಸೂಪರ್ವೈಸರ್ ಅಬ್ದುರ್ರಹ್ಮಾನ್ ಶಮ್ಸ್ ಹೇಳಿದ್ದಾರೆ.
ಈಗ ಹಜ್ ಉಮ್ರಾ ಯಾತ್ರೆಗೆ ಜನರು ವಿದೇಶಗಳಿಂದ ಹಜ್ ಉಮ್ರಾ ಏಜೆಂಟ್ಗಳ ಮೂಲಕ ಬರುತ್ತಿದ್ದಾರೆ. ಇಲೆಕ್ಟ್ರಾನಿಕ್ ವೀಸಾಗಳನ್ನು ನೀಡುವುದು ಆರಂಭಗೊಳ್ಳುವುದರೊಂದಿಗೆ ಅಧಿಕೃತ ಪರವಾನಿಗೆ ಹೊಂದಿದ ಹಜ್ ಸೇವಾದಾತ ಕಂಪೆನಿಗಳ ಪ್ಯಾಕೇಜ್ ಮೂಲಕ ಯಾತ್ರಾರ್ಥಿಗಳ ಮೂಲಕ ಸೌದಿಗೆ ಬರಬೇಕಾಗುತ್ತದೆ. ಎಂದು ಶಮ್ಸ್ ಹೇಳಿದ್ದಾರೆ.
ಹಜ್ ನಿರ್ವಹಿಸಲು ಬರುವವರು ಹಜ್ ಪೋರ್ಟಲ್ಗೆ ಸರಿಯಾದ ವಿವರಗಳನ್ನು ಅಪ್ಲೋಡ್ ಮಾಡಿದರೆ ಕೆಲವೇ ನಿಮಿಷದಲ್ಲಿ ಅವರಿಗೆ ವೀಸಾ ನೀಡಲಾಗುತ್ತದೆ ಎಂದು ಅವರು ಹೇಳಿದರು.












