ಮೋದಿ ಪರ ಹೇಳಿಕೆ: ಕಲ್ಯಾಣ್ ಸಿಂಗ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ- ಚುನಾವಣಾ ಆಯೋಗ

0
648

ಹೊಸದಿಲ್ಲಿ,ಎ.2: ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿಯಾಗಲು ಶ್ರಮಿಸಬೇಕೆಂದು ಕಲ್ಯಾಣ್ ಸಿಂಗ್ ಹೇಳಿಕೆ ನೀಡಿದ್ದರು. ಕಲ್ಯಾಣ್ ಸಿಂಗ್‍ರ ಹೇಳಿಕೆಯನ್ನು ರಾಷ್ಟ್ರಪತಿಯ ಗಮನಕ್ಕೆ ತರಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಳೆದ ತಿಂಗಳು 23ನೇ ತಾರೀಕಿನಂದು ಅಲಿಗಡದಲ್ಲಿ ಸಭೆಯೊಂದರಲ್ಲಿ ಮಾತಾಡುತ್ತಾ ಕಲ್ಯಾಣ್ ಸಿಂಗ್ ‘ನಾವೆಲ್ಲರೂ ಬಿಜೆಪಿ ಕಾರ್ಯಕರ್ತರಾಗಿದ್ದೇವೆ. ಆದ್ದರಿಂದ ಬಿಜೆಪಿಯ ವಿಜಯವನ್ನು ಬಯಸುತ್ತೇವೆ. ನಾವೆಲ್ಲರೂ ಮೋದಿ ಪುನಃ ಪ್ರಧಾನಿಯಾಗಲು ಬಯಸುತ್ತಿದ್ದೇವೆ. ಮೋದಿ ಪ್ರಧಾನಿಯಾಗುವುದು ದೇಶ ಮತ್ತು ಸಮಾಜಕ್ಕೆ ಅತ್ಯಗತ್ಯವಾಗಿದೆ’ ಎಂದು ಹೇಳಿದ್ದರು.

ಈ ಹಿಂದೆ ಹಿಮಾಚಲ ಪ್ರದೇಶ ರಾಜ್ಯಪಾಲರಾಗಿದ್ದ ಗುಲ್ಶರ್ ಅಹ್ಮದ್ ಇದಕ್ಕಿಂತ ಮೊದಲು ಚುನಾವಣಾ ಆಯೋಗದ ನೀತಿ ಸಂಹಿತೆ ಉಲ್ಲಂಘಿಸಿದ್ದರು. ತನ್ನ ಪುತ್ರ ಸಯೀದ್ ಅಹ್ಮದ್‍ರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿತ್ತು.