ಹೊಸದಿಲ್ಲಿ,ಎ.2: ಗಲಭೆ ಪ್ರಕರಣದಲ್ಲಿನ ಶಿಕ್ಷೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಪಾಟಿದಾರ್ ಅನಾಮತ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ಶೀಘ್ರ ವಿಚಾರಣೆಗೆತ್ತಿಕೊಳ್ಳುವುದಿಲ್ಲ. ತುರ್ತಾಗಿ ಅರ್ಜಿಯಲ್ಲಿ ವಿಚಾರಣೆ ನಡೆಸಬೇಕಾದ ಅಗತ್ಯವೇನಿದೆ ಎಂದು ಕೋರ್ಟು ಹಾರ್ದಿಕ್ರನ್ನು ಪ್ರಶ್ನಿಸಿದೆ. ತನ್ನ ವಿರುದ್ಧ ಶಿಕ್ಷೆಯನ್ನು ರದ್ದುಪಡಿಸಬೇಕೆಂದು ಅವರು ಸಲ್ಲಿಸಿದ ಅರ್ಜಿಯನ್ನು ಈಗಾಗಲೇ ಗುಜರಾತ್ ಹೈಕೋರ್ಟು ತಿರಸ್ಕರಿಸಿದೆ. ನಂತರ ಅವರು ಸುಪ್ರೀಂಕೋರ್ಟಿನ ಮೊರೆ ಹೋಗಿದ್ದಾರೆ.
ಗುಜರಾತಿನ ಮೊಹ್ಸಾನ ಕೋರ್ಟು 2015ರ ಅರ್ಸನ್ ಗಲಭೆ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ಗೆ ಎರಡು ವರ್ಷ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ. ಆದ್ದರಿಂದ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗುಜರಾತಿನಿಂದ ಲೋಕಸಭೆಗೆ ಸ್ಪರ್ಧಿಸಲು ಹಾರ್ದಿಕ್ ಬಯಸಿದ್ದಾರೆ.
ಗುಜರಾತ್ನ 28 ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಎಪ್ರಿಲ್ ನಾಲ್ಕು ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವಾಗಿದ್ದು ಕಾಂಗ್ರೆಸ್ ಟಿಕೆಟ್ನಲ್ಲಿ ಅವರು ಸ್ಪರ್ಧಿಸಲು ಬಯಸಿದ್ದಾರೆ.












