ತಾನು ಮುಸ್ಲಿಮರಿಗೂ ಏನೂ ಮಾಡಿಲ್ಲ, ಹಿಂದೂಗಳಿಗೂ ಏನೂ ಮಾಡಿಲ್ಲ; 2022ರಲ್ಲಿ ಮಾಡಿ ತೋರಿಸುವೆ-ನರೇಂದ್ರ ಮೋದಿ

0
1246

ಹೊಸದಿಲ್ಲಿ,ಎ.5: ದೇಶದ ಮುಸ್ಲಿಮರಿಗಾಗಿ ತಾನು ಏನೂ ಮಾಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾಎ. ಆದರೆ, ಮುಸ್ಲಿಮರಿಗೆ ಮಾತ್ರವಲ್ಲ, ಹಿಂದೂಗಳಿಗಾಗಿಯೂ ಏನೂ ಮಾಡಿಲ್ಲ. 2022ರಲ್ಲಿ ಅದನ್ನು ಮಾಡಿ ತೋರಿಸುವೆ. 2022ಕ್ಕಾಗುವಾಗ ದೇಶದ ಎಲ್ಲರಿಗೂ ವಸತಿಯೆಂಬ ಯೋಜನೆಯನ್ನು ಪೂರ್ತಿಗೊಳಿಸುವೆ ಎಂದು ಎಬಿಪಿ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.

“ಮುಸ್ಲಿಮರಿರಲಿ, ಹಿಂದೂಗಳಿರಲಿ 2022ಕ್ಕಾಗುವಾಗ ಎಲ್ಲರಿಗೂ ವಿದ್ಯುತ್ ಲಭಿಸಲಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನನ್ನ ಘೋಷಣೆಯಾಗಿದೆ. ನನ್ನ ಸರಕಾರದಲ್ಲಿ ಧರ್ಮಕ್ಕೆ ಸ್ಥಾನವಿಲ್ಲ’ ಎಂದು ಅವರು ಮುಸ್ಲಿಮರಿಗೆ ಬಿಜೆಪಿ ಸರಕಾರದಲ್ಲಿ ವಿಶ್ವಾಸ ಇಲ್ಲವೇ ಎನ್ನುವ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ರಾಮ ಮಂದಿರ ನಿರ್ಮಾಣ ತನ್ನೊಬ್ಬನ ಬೇಡಿಕೆಯಲ್ಲ. ದೇಶದ ಜನರು ಅದನ್ನು ಬಯಸುತ್ತಿದ್ದಾರೆ. ರಾಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟಿನ ತೀರ್ಪಿಗೆ ಕಾಯುಬೇಕಾಗುತ್ತದೆ. ಕೆಲವರು ಮತಗಳಿಕೆಗಾಗಿ ಕೆಲವರು ಮುಸ್ಲಿಮರ ನಡುವೆ ಅಸುರಕ್ಷಿತಾವಸ್ಥೆ ಬೆಳೆಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆ ಕಪಟತನವಾಗಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.