ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌: ಸ್ವಪ್ನಾ ಬರ್ಮನ್‌ಗೆ ಬೆಳ್ಳಿ, ಸಂಜೀವಿನಿಗೆ ಕಂಚು

0
1474

ದೋಹಾ: ಏಷ್ಯನ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮಂಗಳವಾರ ಭಾರತದ ಬಹುನಿರೀಕ್ಷಿತ ಹೆಪ್ಟಾಥ್ಲಾನ್ ಆಟಗಾರ್ತಿ ಸ್ವಪ್ನಾ ಬರ್ಮನ್ ಬೆಳ್ಳಿ ಪದಕ ಗೆದ್ದರು. ಕಡೆಯ ಸುತ್ತಿನ ಪಂದ್ಯದಲ್ಲಿ ಸ್ವಪ್ನಾ 5993 ಅಂಕ ಪಡೆದು ಈ ಸಾಧನೆ ಮಾಡಿದ್ದಾರೆ. ಮಹಿಳೆಯರ 10,000 ಮೀ. ಸ್ಪರ್ಧೆಯಲ್ಲಿ  ಸಂಜೀವನಿ ಜಾಧವ್ ಅವರು 32: 44.96 ರ ವೈಯಕ್ತಿಕ ಸಾಧನೆಯೊಂದಿಗೆ ಕಂಚಿನ ಪದಕಕ್ಕೆ ಭಾಜನರಾದರು. ಭಾರತ ಈಗ ಒಟ್ಟು 2 ಚಿನ್ನ , 5 ಬೆಳ್ಳಿ ಮತ್ತು 6  ಕಂಚಿನ ಪದಕವನ್ನು ಗಳಿಸಿದೆ.