ಹೊಸದಿಲ್ಲಿ,ಮೇ 1: ಬಿಜೆಪಿ ಉತ್ತರ ಪ್ರದೇಶದಲ್ಲಿ ನೆಲಸಮವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು. ಕಾಂಗ್ರೆಸ್ ಅದರ ಶಕ್ತಿ ಕೇಂದ್ರಗಳಲ್ಲಿ ಉತ್ತಮ ಸಾಧನೆ ಮಾಡಲಿದೆ. ಈ ಸಲದ ಚುನಾವಣೆಯಲ್ಲಿ ಇಲ್ಲೆಲ್ಲ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಲಿದ್ದಾರೆ ಎಂದು ಅವರು ಹೇಳಿದರು.
ವಿಜಯ ಸಾಧ್ಯತೆ ಕಡಿಮೆ ಇರುವಲ್ಲಿ ಕಾಂಗ್ರೆಸ್ ಅಭ್ಯಥಿಗಳು ಮಹಾಸಖ್ಯದ ಮತಗಳಲ್ಲಿ ಸೋರಿಕೆ ಮಾಡಲಾರರು.ಬದಲಾಗಿ ಬಿಜೆಪಿ ಮತಗಳನ್ನು ಕಾಂಗ್ರೆಸ್ ಕಸಿದು ಕೊಳ್ಳಲಿದೆ ಎಂದು ಪ್ರಿಯಾಂಕ ಉತ್ತರ ಪ್ರದೇಶದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುತ್ತಾ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.












