ಮಲಪ್ಪುರಂ,ಮಾ. 18: ವೆಸ್ಟ್ ನೈಲ್ ವೈರಸ್ ಜ್ವರ ಬಾಧಿತ ಮಗು ಚಿಕಿತ್ಸೆ ಫಲಕಾರಿಯಾಗೇ ಮೃತಪಟ್ಟಿದ್ದು ಮಲಪ್ಪುರಂ ವೇಂಙರ ಏ.ಆರ್. ನಗರ ನಿವಾಸಿಯಾದ ಮುಹಮ್ಮದ್ ಶಾನ್(6) ಎಂದು ಗುರುತಿಸಲಾಗುದೆ. ಮಗು ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರು ಎಳೆದಿದೆ.
ಆರು ವರ್ಷದ ಮಗವಿಗೆ ವೆಸ್ಟ್ ನೈಲ್ ವೈರಸ್ ಬಾಧಿಸಿರುವುದು ದೃಢವಾದ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಪ್ರತಿನಿಧಿಗಳ ತಂಡವು ಭೇಟಿ ನೀಡಿತ್ತು. ಕ್ಯೂಲೆಕ್ಸ್ ಜಾತಿಗೆ ಸೇರಿದ ಸೊಳ್ಳೆಗಳು ಕೂಡ ಪತ್ತೆಯಾಗಿದ್ದವು.
ವೆಸ್ಟ್ ನೈಲ್ ವೈರಸ್ ಎಂದರೆ ಹಕ್ಕಿಗಳಿಂದ ಸೊಳ್ಳೆಗಳ ಮೂಲಕ ಮನುಷ್ಯರಿಗೆ ಹರಡುವ ವೈರಸ್ ಆಗಿದೆ. 150 ಮಂದಿಯಲ್ಲಿ ಈ ರೋಗ ತನ್ನ ಪ್ರಭಾವ ಬೀರುವ ಸಾಧ್ಯತೆಗಳಿವೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯವಿರುವ ಸಾಂಕ್ರಾಮಿಕ ರೋಗವಾಗಿದೆ. ಸಣ್ಣ ಜ್ವರ, ತಲೆನೋವು, ವಾಕರಿಕೆ ಇತ್ಯಾದಿ ರೋಗ ಲಕ್ಷಣವಾಗಿದೆ. ಶೇ.10ರಷ್ಟು ಸಾವಿನ ಸಾಧ್ಯತೆಗಳಿವೆ. ಆದರೆ ವೆಸ್ಟ್ ನೈಲ್ಗೆ ವ್ಯಾಕ್ಸಿನ್ ಲಭ್ಯವಿಲ್ಲ.












