ಮಥುರಾ: ಹೇಮಮಾಲಿನಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ಸಿನಿಂದ ಸಪ್ನ ಚೌಧರಿ ಕಣಕ್ಕೆ

0
2005

ಆಗ್ರಾ,ಮಾ.23: ಉತ್ತರಪ್ರದೇಶದ ಮಥುರಾ ಲೋಕಸಭಾ ಸೀಟಿನಲ್ಲಿ ಈ ಸಲ ಬಿಜೆಪಿಯ ಹೇಮಮಾಲಿನಿ ವಿರುದ್ಧ ನೃತ್ಯಕಲಾವಿದೆ ಸಪ್ನಾ ಚೌಧರಿ ಕಾಂಗ್ರೆಸ್ ಟಿಕೆಟ್‍ನಲ್ಲಿ ಸ್ಪರ್ಧಿಸುವ ವಿಚಾರ ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಮಥುರಾದ ಚುನಾವಣಾ ಕಣ ಬಹಳ ಕುತೂಹಲ ಕೆರಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಪ್ನಾ ಚೌಧರಿ ನಿಂತರೆ, ಹೇಮಾರಿಗೆ ಬಹುದೊಡ್ಡ ಸವಾಲು ಎನಿಸಿಕೊಳ್ಳಲಿದ್ದಾರೆ. ಮೂಲತಃ ಹರ್ಯಾಣದವರಾದ ಸಪ್ನಾ ಚೌಧರಿ ನೃತ್ಯ ಕಲಾವಿದೆಯಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.