ಕೊಲ್ಕತಾ,ಎ.18: ಚುನಾವಣೆಗೆ ಸಂಬಂಧಿಸಿ ದಾಳಿ ನಡೆದಿರುವ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದ್ದು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕೊಲೆಯೆಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಕಾರ್ಯಕರ್ತ ಶಿಶುಪಾಲ್ ಸಾಹಿಸ್ರ ಮೃತದೇಹ ಪಶ್ಚಿಮ ಬಂಗಾಳದ ಪುರೂಲಿಯದಲ್ಲಿ ಪತ್ತೆಯಾಗಿದೆ.
ಸೆನಬನೊ ಗ್ರಾಮದಲ್ಲಿ ಇಂದು ಬೆಳಗ್ಗೆ ಮರದಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಶಿಶುಪಾಲ್ರ ಮೃತದೇಹ ಕಂಡು ಬಂದಿತ್ತು.ಆಡಳಿತ ಪಕ್ಷ ತೃಣಮೂಲ್ ಕಾಂಗ್ರೆಸ್ನ ಗೂಂಡಾಗಳು ಕೊಲೆಪಾತಕದ ಹಿಂದಿದೆ ಎಂದು ಬಿಜೆಪಿ ಆರೋಪಿಸಿತು. ಘಟನೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೊಲೆ ಕೃತ್ಯವಾಗಿದೆಯೇ, ಆತ್ಮಹತ್ಯೆಯೇ ಎನ್ನುವುದರತ್ತ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. ಶಿಶುಪಾಲ್ರ ತಂದೆ ಬಿಜೆಪಿ ಆಡಳಿತ ಇರುವ ಶಿರ್ಕಾಬಾದ್ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾಗಿದ್ದಾರೆ. ಪುರೂಲಿಯದಲ್ಲಿ ಮೇ 12ಕ್ಕೆ ಚುನಾವಣಾ ನಡೆಯುತ್ತಿದೆ. ಆರು ಹಂತದಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಇಂದು ಮೂರು ಸೀಟುಗಳಲ್ಲಿ ಮತದಾನ ನಡೆಯಿತು. ಇಂದು ಮತದಾನದ ವೇಳೆ ವ್ಯಾಪಕ ಅಕ್ರಮ ಘಟನೆಗಳು ನಡೆದಿವೆ.












