ಸೆ.11ರ ಭಯೋತ್ಪಾದನಾ ದಾಳಿಗೆ ಮೌನವಾಗಿರಲಾರೆ- ಇಹ್ಲಾನ್ ಉಮರ್

0
1046

ವಾಷಿಂಗ್ಟನ್,ಎ.16: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಲಪಂಥೀಯ ಮಾಧ್ಯಮಗಳು ಹಾಗೂ ರಿಪಬ್ಲಿಕನ್ ಪಾರ್ಟಿಯ ದಾಳಿಗೆ ಮೌನವಾಗಿ ಇರಲಾರೆ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯೆ ಇಹ್ಲಾನ್ ಉಮರ್ ಹೇಳಿದ್ದಾರೆ. ಕಾಂಗ್ರೆಸ್‍ಗೆ ಸ್ಪರ್ಧಿಸಿ ಗೆದ್ದಿರುವುದು ಮೌನವಾಗಿರಲು ಅಲ್ಲ. ಅಮೆರಿಕದೊಂದಿಗೆ ತನಗಿರುವ ಅಚಂಚಲ ಪ್ರೀತಿಯನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ತನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಇಹ್ಲಾನ್ ಟ್ವೀಟ್ ಮಾಡಿದ್ದಾರೆ.

ತನಗೆ ಬೆಂಬಲ ನೀಡಿದವರಿಗೆ ಇಹ್ಲಾನ್ ಕೃತಜ್ಞತೆ ಸಲ್ಲಿಸಿದರು. ಸೆಪ್ಟಂಬರ್ ಹನ್ನೊಂದರ ಭಯೋತ್ಪಾದನಾ ದಾಳಿಯ ಕುರಿತು ಇಹ್ಲಾನ್ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಕೆಲವು ಮಂದಿಯ ದುಷ್ಕೃತ್ಯದಿಂದ ಎಲ್ಲ ಮುಸ್ಲಿಮರು ದುಷ್ಪರಿಣಾಮ ಅನುಭವಿಸುತ್ತಿದ್ದಾರೆ ಎಂದು ಇಹ್ಲಾನ್ ಹೇಳಿದ್ದರು. ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟಂಬರ್ ಹನ್ನೊಂದರ ಭಯೋತ್ಪಾದನಾ ದಾಳಿಯನ್ನು ನಾವು ಮರೆಯುವುದಿಲ್ಲ ಎಂದು ಘಟನೆಯ ದೃಶ್ಯವನ್ನು ಟ್ವೀಟ್ ಮಾಡಿದ್ದರು. ಇಹ್ಲಾನ್ ದಾಳಿಯ ವ್ಯಾಪ್ತಿಯನ್ನು ಕಡಿಮೆ ಮಾಡುವ ಹೇಳಿಕೆಯನ್ನು ನೀಡಿದರು ಎಂದು ಟ್ರಂಪ್ ಟೀಕಿಸಿದ್ದಾರೆ.