ಸ್ಪೈನ್‍ನಲ್ಲಿ ಅಧಿಕಾರಕ್ಕೇರಿದ ಸೋಶಿಯಲಿಸ್ಟ್ ಪಾರ್ಟಿ

0
571

ಮ್ಯಾಡ್ರಿಡ್,ಮೇ 1: ಸ್ಪೈನ್‍ನಲ್ಲಿ ಸೋಶಿಯಲಿಸ್ಟ್ ಪಾರ್ಟಿ ಅಧಿಕಾರಕ್ಕೆ ಬಂದಿದೆ. 99.9 ಮತಗಳನ್ನು ಎಣಿಸಿದಾಗ 123 ಸೀಟುಗಳನ್ನು ಗಳಿಸಿ ಪ್ರಧಾನಿ ಪೆಡ್ರೊ ಸ್ಯಾಂಚಸ್‍ರ ಸ್ಪಾನಿಶ್ ಸೊಶಯಲಿಸ್ಟ್ ವರ್ಕರ್ಸ್ ಪಾರ್ಟಿ ಅಧಿಕಾರ ಸನಿಹದಲ್ಲಿದೆ. ಪ್ರಧಾನ ಪ್ರತಿಪಕ್ಷ ಪೀಪಲ್ಸ್ ಪಾರ್ಟಿ ಕೇವಲ 66 ಸೀಟುಗಳನ್ನು ಪಡೆಯುವಲ್ಲಿ ಸಫಲವಾಯ್ತು. 350 ಸೀಟುಗಳು ಪಾರ್ಲಿಮೆಂಟಿನಲ್ಲಿವೆ. ಅತಿದೊಡ್ಡ ಏಕ ಪಕ್ಷವಾದರೂ ಸರಕಾರ ರಚಿಸುವಷ್ಟು ಬಹುಮತ ಸೊಶಲಿಸ್ಟ್ ಪಾರ್ಟಿ ಗಳಿಸಿಲ್ಲ ಎನ್ನುವುದು ಗಮನಾರ್ಹ.

ಎಡಪಕ್ಷ, ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ಫೆಡ್ರೊ ಸ್ಯಾಂಚಸ್ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ. ಸೇನೆಯ ಆಡಳಿತ ಮುಕ್ತವಾಗಿದ್ದ 1970ರ ನಂತರ ಬಲಪಂಥೀಯ ಪಕ್ಷವಾದ ವೋಕ್ಸ್ ಪಾರ್ಟಿಗೆ ಈ ಸಲದ ಚುನಾವಣೆಯಲ್ಲಿ ಕೆಲವು ಸೀಟುಗಳು ಲಭಿಸಿವೆ. ಸೊಶಲಿಸ್ಟ್ ಪಕ್ಷದ ಗೆಲುವು ಪ್ರಧಾನಿಯ ವೈಯಕ್ತಿಕ ವರ್ಚಸ್ಸಿನ ವಿಜಯ ಎಂದು ಹೇಳಲಾಗುತ್ತಿದೆ. 2016ರಲ್ಲಿ ಸೋಶಲಿಸ್ಟ್ ಪಾರ್ಟಿ ಶೇ. 23 ಮತಗಳಿಸಿತ್ತು. ಅಲ್ಲಿಂದ ಈ ಚುನಾವಣೆಯಲ್ಲಿ ಶೇ.30ರಷ್ಟು ಮತಗಳು ಸೋಶಲಿಸ್ಟ್ ಪಕ್ಷಕ್ಕೆ ಸಿಕ್ಕಿದೆ. ಇದು ಪ್ರಧಾನಿಯ ಪ್ರಭಾವದಿಂದ ಸಾಧ್ಯವಾಯಿತು ಎಂದು ವರದಿಯಾಗಿದೆ.