ಬೆಂಗಳೂರು: ಪುಲ್ವಾಮ ಭಯೋತ್ಪಾದನಾ ದಾಳಿ ನಡೆಸಿದ ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ನನ್ನು ಈ ಹಿಂದೆ ದೇಶದ ಜೈಲಿನಿಂದ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟದ್ದು ಬಿಜೆಪಿ ಅಲ್ವ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಕರ್ನಾಟಕದ ಚುನಾವಣಾ ಪ್ರಚಾರ ಆರಂಭಿಸಿ ಅವರು ಮಾತಾಡುತ್ತಿದ್ದರು. ಕಂದಹಾರ ವಿಮಾನ ಅಪಹರಣ ಪ್ರಕರಣದಲ್ಲಿ ಜೈಲಿನೊಳಗಿದ್ದ ಮಸೂದ್ನನ್ನು ಅಂದಿನ ಬಿಜೆಪಿ ಸರಕಾರ ಜೈಲಿನಿಂದ ಬಿಡುಗಡೆಗೊಳಿಸಿದನ್ನು ರಾಹುಲ್ ಉದ್ಧರಿಸಿ ಈ ಪ್ರಶ್ನೆಯನ್ನು ಜನರ ಮುಂದಿರಿಸಿದರು.
ಕಾವಲುಗಾರ ಮೋದಿಯನ್ನು ಆಕ್ಷೇಪಿಸಲು ಭ್ರಷ್ಟಾಚಾರಿಗಳು ಸ್ಪರ್ಧಿಸುತ್ತಿದ್ದಾರೆ. ಮೋದಿಯನ್ನು ಟೀಕಿಸಿದರೆ ವೋಟು ಸಿಗುತ್ತದೆ ಎಂದು ಅವರು ತಿಳಿದಿದ್ದಾರೆ ಎಂದು ಮೋದಿ ಈ ಹಿಂದೆ ಪ್ರತಿಪಕ್ಷದ ವಿರುದ್ಧ ಉಗ್ರವಾಗಿ ಟೀಕಿಸಿದ್ದರು. ಮುಂಬೈ ಭಯೋತ್ಪಾದನಾ ದಾಳಿಯ ನಂತರ ಸೇನೆ ಪ್ರತಿದಾಳಿಗೆ ಸಿದ್ಧವಾಗಿತ್ತು. ಆದರೆ ಅಂದಿನ ಸರಕಾರ ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದು ಮೋದಿ ಹೇಳಿದ್ದರು.












