ಬಿಜೆಪಿ ವನ್ ಮ್ಯಾನ್ ಶೋ, ಟು ಮ್ಯಾನ್ ಆರ್ಮಿ ಆಗಿದೆ- ಶತ್ರುಘ್ನ ಸಿನ್ಹಾ

0
820

ಹೊಸದಿಲ್ಲಿ,ಎ.6: ಕಾಂಗ್ರೆಸ್‍ಗೆ ಸೇರ್ಪಡೆಯಾದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಬಿಹಾರದ ಪಾಟ್ನಾ ಸಾಹಿಬ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡೇ ಅವರು ಮೋದಿ ಸರಕಾರವನ್ನು ಟೀಕಿಸುತ್ತಿದ್ದರು.ಆದ್ದರಿಂದ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ನಿರಾಕರಿಸಲಾಗಿತ್ತು.

ಇಂದು ಅವರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು ಈ ಸಂದರ್ಭದಲ್ಲಿ ಅವರು ಬಿಜೆಪಿ, ಮೋದಿ ಮತ್ತು ಅಮಿತ್‍ಶಾರನ್ನು ಕಟುವಾಗಿ ಟೀಕಿಸಿದ್ದಾರೆ. ಬಿಜೆಪಿ ಒನ್ ಮ್ಯಾನ್ ಶೋ, ಟು ಮ್ಯಾನ್ ಆರ್ಮಿಯಾಗಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದರು. ಅಲ್ಲಿ ಎಲ್ಲ ನಡೆಯುವುದು ಪ್ರಧಾನಿಯ ಕಚೇರಿಯಲ್ಲಿ. ಸಚಿವರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ. ಪ್ರಜಾಪ್ರಭುತ್ವ ಹೇಗೆ ಸರ್ವಾಧಿಕಾರ ಆಗುತ್ತಿದೆ ಎನ್ನುವುದನ್ನು ನಾನು ಅಲ್ಲಿ ನೋಡಿದೆ ಎಂದು ಶತ್ರುಘ್ನ ಸಿನ್ಹಾ ಹೇಳಿದರು.