20 ನಿಮಿಷ ಕಾರಿನೊಳಗೇ ಬಂಧಿಯಾದ 2 ವರ್ಷದ ಮಗು: ಗ್ಲಾಸ್ ಒಡೆದು ಮಗುವಿನ ರಕ್ಷಣೆ

0
1584

ಯೂಸುಫ್ ಅರ್ಷದ್ ಅಲಿ

ಪುತ್ತೂರು: ಪೋಷಕರು ಮಾಡಿದ ಯಡವಟ್ಟಿನಿಂದ ಸುಮಾರು 2 ವರ್ಷದ ಮಗು, ಸುಮಾರು 20 ನಿಮಿಷ ಕಾಲ ಕಾರಿನಲ್ಲೇ ಬಂಧಿಯಾದ ಘಟನೆ ಪುತ್ತೂರಿನ ಸಂಜೀವ ಶೆಟ್ಟಿ ಅಂಗಡಿ ಎದುರು ನಡೆದ ಬಗ್ಗೆ ವರದಿಯಾಗಿದೆ.

ಬಟ್ಟೆ ಖರೀದಿಗೆ ಬಂದಿದ್ದ ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಪೋಷಕರು ಮಗುವನ್ನು ಕಾರಿನಲ್ಲೇ ಬಿಟ್ಟು, ಕೀ ಕೂಡ ಅದರಲ್ಲೆ ಬಿಟ್ಟು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ಸಂಜೀವ ಶೆಟ್ಟಿ ಜವುಳಿ ಅಂಗಡಿಗೆ ಹೋಗಿದ್ದರು. ಅಷ್ಟರಲ್ಲೇ ಅವರಿಗೆ ಕಾರಿನ ಕೀ ಒಳಗೆ ಬಾಕಿ ಆಗಿದೆ ಎನ್ನುವಷ್ಟರಲ್ಲೇ ಕಾರ್ ಆಟೋ ಲಾಕ್ ಆಗಿತ್ತು. ಇದೇ ಸಂದರ್ಭದಲ್ಲಿ ಮಗು ಕೂಡಾ ಕಾರಿನ ಕೀಯನ್ನು ಹಿಡಿದು ಕೊಂಡು ಆಟ ಆಡುತ್ತಿತ್ತು ಹೊರತು ಕಾರಿನ ಲಾಕ್ ಓಪನ್ ಮಾಡಲು ಮಗುವಿಗೆ ತಿಳಿದಿರಲಿಲ್ಲ. ವಿಷಯ ತಿಳಿದು ಜನರ ಗುಂಪು ಕಾರಿನ ಸುತ್ತು ಆವರಿಸಿದಾಗ ಮಗು ಅಳತೊಡಗಿತ್ತು. ಇದರಿಂದ ಗಾಭರಿಯಾದ ಪೋಷಕರು ಕಾರಿನ ಲಾಕ್ ತೆಗೆಯಲು ಪೇಚಾಡುತ್ತಿದ್ದರು.ಇದನ್ನು ಗಮನಿಸಿದ ಕೂರ್ನಡ್ಕ ಯೆಂಗ್ ಮೆನ್ಸ್‌ನ ಅಧ್ಯಕ್ಷ ಸಿರಾಜ್ ಎ ಕೆ ಹಾಗೂ ಇನ್ನಿತರರು ಬಂದು ಕಾರಿನ ಹಿಂಬದಿ ಎಡ ಬದಿಯಲ್ಲಿರುವ ಗ್ಲಾಸ್‌ನ್ನು ಒಡೆದು ಮಗುವನ್ನು ರಕ್ಷಿಸಲಾಯಿತು ಇದೇ ಸಂದರ್ಭದಲ್ಲಿ ಸಿರಾಜ್ ಅವರ‌ ಕೈಗೆ ಗ್ಲಾಸ್ ತಗುಲಿ‌ ಗಾಯಗೊಂಡರು.

ಮಹಾರಾಷ್ಟ್ರ ನೋಂದಾವಣೆ ಪಡೆದು ಕೊಂಡಿದ್ದ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಅಂಗಡಿಗೆ ಬಂದ ಗ್ರಾಹಕರು ಯಾರೆಂದು ತಿಳಿದಿಲ್ಲ.

ಫೇಸ್ ಬುಕ್ ಕೃಪೆ