ಸನ್ಮಾರ್ಗ ವಾರ್ತೆ
ಲಕ್ನೊ, ಆ. 20: ಕಳೆದ ವಾರ ಮೂರು ಬಾರಿ ತನ್ನನ್ನು ಸರಕಾರ ಗೃಹ ಬಂಧನದಲ್ಲಿರಿಸಿತ್ತು ಎಂದು ಹೋರಾಟಗಾರ ಮ್ಯಾಗಸ್ಸೇಸೆ ಪ್ರಶಸ್ತಿ ವಿಜೇತ ಸಂದೀಪ್ ಪಾಂಡೆ ಹೇಳಿದರು. ಅಭಿವ್ಯಕ್ತಿ ಸ್ವಾತಂತ್ಯವನ್ನು ತಡೆಯುವ ಕೆಲಸವನ್ನು ಪೊಲೀಸರು ಸರಕಾರ ಮಾಡಿದರು. ಆಗಸ್ಟ್ 11, 16,17 ತಾರೀಕಿನಂದು ತನ್ನನ್ನು ಗೃಹ ಬಂಧನದಲ್ಲಿರಿಸಲಾಯಿತು ಎಂದು ಅವರು ಹೇಳಿದ್ದಾರೆ.
ಕೋಮು ಸೌಹಾರ್ದವನ್ನು ಮುಂದಿಟ್ಟು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮಾಡಲು ಹೀಗೆ ಮಾಡಲಾಯಿತು ಎಂದು ಪಾಂಡೆ ಅರೋಪಿಸಿದರು. ಆದರೆ ಈ ಆರೋಪವನ್ನು ಲಕ್ನೊದ ಜಿಲ್ಲಾಡಳಿತ ನಿರಾಕರಿಸಿದೆ. ಈ ಕುರಿತು ವಿವರವಾಗಿ ಮಾತನಾಡಿದ ಸಂದೀಪ್ ಪಾಂಡೆ, ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದರ ವಿರುದ್ಧ ಆಗಸ್ಟ್ 16ಕ್ಕೆ ಲಕ್ನೊದಲ್ಲಿ ಕ್ಯಾಂಡಲ್ ಉರಿಸಿ ಪ್ರತಿಭಟನೆ ಆಯೋಜಿಸಲಾಗಿತ್ತು. ಅಲ್ಲಿಗೆ ಹೋಗಬಾರದು ಎಂದು ಪೊಲೀಸರು ತಡೆದರು ಎಂದಿದ್ದಾರೆ.
ಪೊಲೀಸರು ತನ್ನ ಮನೆಗೆ ಮತ್ತು ವಕೀಲರ ಮನೆಗೆ ಬಂದರು. ಕಾರ್ಯಕ್ರಮ ಆರಂಭವಾಗುವ ಒಂದೂವರೆ ಗಂಟೆಗೆ ಮೊದಲು ತಮ್ಮನ್ನು ಗೃಹಬಂಧನದಲ್ಲಿಡಲಾಯಿತು.ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇಧಿಸಿದಂತೆ ಕಾರ್ಯಗಳೆಲ್ಲವೂ ಇದ್ದವು. ಆಗಸ್ಟ್ 11ರ ಕಾರ್ಯಕ್ರಮ ಕಾಶ್ಮೀರ ಕಣಿವೆಯ ಪ್ರಜಾಪ್ರಭುತ್ವ ಮರುಸ್ಥಾಪಿಸಲು ಆಗ್ರಹಿಸುವುದಾಗಿತ್ತು.ಆದರೆ, ಕಾರ್ಯಕ್ರಮ ಆಯೋಜಿಸಲಾಗಿದ್ದ ಹಝ್ರತ್ ಗಂಜ್ನ ಎಲ್ಲ ಕಾರ್ಯಕ್ರಮಗಳನ್ನು ಹೈಕೋರ್ಟು ನಿಷೇಧಿಸಿದೆ ಎಂದು ಲಕ್ನೊ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮ ಹೇಳಿದರು.
ನಗರದ ಬೇರೆ ಕಡೆಗಳಲ್ಲಿ ಪ್ರತಿಭಟನೆ ನಡೆಸುವುದನ್ನು ತಡೆಯುವುದಿಲ್ಲ. ನಿಷೇಧಿತ ಪ್ರದೇಶದಲ್ಲಿ ಯಾಕೆ ಕಾರ್ಯಕ್ರಮ ಇಟ್ಟುಕೊಂಡಿದ್ದೀರಿ ಎಂದು ಮ್ಯಾಜಿಸ್ಟ್ರೇಟ್ ಕೇಳಿದರು. ಇಕೊ ಗಾರ್ಡನ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿತ್ತು. ಅದು ಪಾಲನೆಯಾಗಿಲ್ಲ. ಪಾಂಡೆಯನ್ನು ಗೃಹ ಬಂಧನದಲ್ಲಿರಿಸಲಾಗಿರಲಿಲ್ಲ ಎಂದು ಅವರು ಹೇಳಿದರು.












