ಸಾಲ ನೀಡಲು ಬ್ಯಾಂಕ್ ನಿರಾಕರಣೆ; ಕಿಡ್ನಿ ಮಾರಲು ಮುಂದಾದ ರೈತ

0
489

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.23: ಸಾರ್ವಜನಿಕ ಬ್ಯಾಂಕಿನಲ್ಲಿ ಸಾಲ ನಿರಾಕರಿಸಲ್ಪಟ್ಟು ಸಂಕಷ್ಟಕ್ಕೊಳಗಾದ ರೈತರೊಬ್ಬರು ಕಿಡ್ನಿ ಮಾರಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಛತ್ತರ್‌ಸಾಲಿ ಗ್ರಾಮದ ರೈತ ರಾಮಕುಮಾರ್ ಕಿಡ್ನಿ ಮಾರುವುದಾಗಿ ಫಲಕವನ್ನು ಮನೆಯ ಮುಂದೆ ಇರಿಸಿದ್ದಾರೆ. ಪ್ರಧಾನಿ ಕೌಶಲ ಯೋಜನೆಯಡಿಯಲ್ಲಿ ದನ ಸಾಕಣೆಗೆ ರಾಮಕುಮಾರ್ ಸಾಲ ಕೇಳಿದ್ದರು. ಆದರೆ ಸಾಲ ನೀಡಲು ಸಾರ್ವಜನಿಕ ಬ್ಯಾಂಕುಗಳು ನಿರಾಕರಿಸಿದ್ದು, ಸಂಬಂಧಿಕರಲ್ಲಿ ಸಾಲ ಮಾಡಿ ದನಗಳನ್ನು ಅವರು ಖರೀದಿಸಿದ್ದರು. ಬಡ್ಡಿಯೊಂದಿಗೆ ಸಾಲ ಮರುಪಾವತಿಸುವಂತೆ ಸಾಲ ನೀಡಿದವರು ಕೇಳುತ್ತಿದ್ದಾರೆ. ಆದ್ದರಿಂದ ಬೆರೆ ದಾರಿ ಕಾಣದೇ ಕಿಡ್ನಿ ಮಾರಲು ಹೊರಟಿದ್ದೇನೆ ಎಂದು ರಾಮಕುಮಾರ್ ಹೇಳಿದ್ದಾರೆ. ಇದೇ ವೇಳೆ ಸಾಲ ನಿರಾಕರಿಸಿದ ಕುರಿತು ತನಗೆ ಗೊತ್ತಿಲ್ಲ ಎಂದು ಶಹಾರನ್‍ಪುರ ಡಿವಿಜನಲ್ ಕಮಿಶನರ್ ಸಂಜಯ್ ಕುಮಾರ್ ಹೇಳಿದರು. ಘಟನೆಯ ಕುರಿತು ತನಿಖೆ ನಡೆಸಿ ಕ್ರಮ ಜರಗಿಸುವುದಾಗಿ ಅವರು ಹೇಳಿದರು.