ಎಡವಟ್ಟು’ ಪತ್ರಿಕೋದ್ಯಮ

0
1429

ಅದು ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ಸಂದರ್ಭ. ಸಿದ್ದರಾಮಯ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ರಾಹುಲ್ ಗಾಂಧಿ ಆಗಮಿಸಿದ್ದರು. ತಮ್ಮ‌ ಭಾಷಣದಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಹೇಳುವಾಗ ಬಾಯ್ತಪ್ಪಿನಿಂದ ರಾಹುಲ್ ಗಾಂಧಿ ಅದನ್ನು ಅಮ್ಮ ಕ್ಯಾಂಟೀನ್ ಎಂದು ಹೇಳಿದರು.
ಇಲ್ಲಿನ ಮಾಧ್ಯಮಗಳ (?) ಒಂದು ವರ್ಗಕ್ಕೆ ಇದೇ ಸಾಕಿತ್ತು. ಆ ಎಡವಟ್ಟನ್ನೇ ರಾಷ್ಟ್ರೀಯ ದುರಂತವೆಂಬಂತೆ ಇಡೀ ದಿವಸ ಕುಯ್ದದ್ದೇ ಕುಯ್ದದ್ದು…

ಅದೇ ರೀತಿ ರಾಹುಲ್ ಗಾಂಧಿ ಜನಾಶಿರ್ವಾದ ಯಾತ್ರೆ ಸಂದರ್ಭದಲ್ಲಿ ಬಸವಣ್ಣನವರ ವಚನಗಳನ್ನು  ಹೇಳಿದ ಶೈಲಿಯನ್ನು ಹಿಡಿದು ಈ ಮಾಧ್ಯಮಗಳು ತಮ್ಮ  ತೀಟೆಯನ್ನು ತೀರಿಸಿಕೊಂಡವು.

ಈ ಎಡವಟ್ಟುಗಳ ಸಾಲಿಗೆ ಹೊಸದಾಗಿ ಸೇರ್ಪಡೆ- ಕಾಂಗ್ರೆಸ್ ಸಭೆಯಲ್ಲಿ ಸೋನಿಯಾ ಗಾಂಧಿಯವರ ‘ಬಲತ್ಕಾರ್’ ಎಂಬ ಪದ. ವಾಸ್ತವದಲ್ಲಿ ಸೋನಿಯಾ ಪಲಟ್ಕಾರ್ ( ಪಲಟ್ಕರ್)
ಎಂದೇ ಹೇಳಿದ್ದಾರೆ. ಆದರೆ ಕಿವಿಗೆ ಕಮಲವನ್ನು ತೂರಿಕೊಂಡಿರುವ ಮಾಧ್ಯಮಗಳ ಕೆಲ ಮಂದಿಗೆ ಅದು ಬಲತ್ಕಾರ್ ಎಂದು ಕೇಳಿಸಿದೆ. ಅಪಹಾಸ್ಯ  ಮಾಡಲು ಹೋಗಿ ಖುದ್ದು ಲೇವಡಿಗೊಳಗಾಗಿದ್ದರೆ.

ಅಂದಹಾಗೇ, ಎಡವಟ್ಟುಗಳನ್ನೇ ಮಹಾ ಮಹತ್ವದ ವಿಷಯದ ರೀತಿ ಬಿಂಬಿಸುವ ಈ ಮಾಧ್ಯಮಗಳ ಅಲೋಚನಾ ಕ್ರಮದಲ್ಲಿ ಎಡವಟ್ಟು ಆಗಿರುವುದುದಂತು ಸಾಮನ್ಯ
ವಿವೇಚನೆಯುಳ್ಳ ಮಂದಿಗೆ ಯಾವತ್ತೋ ಗೊತ್ತಾಗಿದೆ.

ಇಂತಹ ವಿಷಯಗಳನ್ನು ‘ಕುಯ್ಯುವ’ ‘ಮಾಧ್ಯಮಗಳ’ ಬಗ್ಗೆ ಹೇಳುವುದಾದರೆ ಮೂರು ವಿಷಯಗಳ ಸಾಧ್ಯತೆ ಇದೆ.

1. ಬಾಲಿಶತನ. ದೇಹ ಬೆಳೆದಿದ್ದ್ರೂ ಇನ್ನೂ ಬುದ್ದಿ ಬೆಳೆದಿಲ್ಲ? ಎಂಬ ರೀತಿಯಲ್ಲಿ ಯಾವ ವಿಷಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು, ಎಂಬ ತಿಳುವಳಿಕೆ ಇನ್ನೂ ಬಂದಿಲ್ಲದಿರುವುದು.

2. ಒಂದು ವಿದ್ಯಮಾನದಲ್ಲಿ ಮುಖ್ಯ ವಿಷಯವನ್ನು ಗ್ರಹಿಸಲು, ಅದನ್ನು ಚರ್ಚೆಗೊಳಪಡಿಸಲು ಸಾಮರ್ಥ್ಯವಿಲ್ಲದಿರುವುದು.  ಉದಾ: ಇಂದಿರಾ ಕ್ಯಾಂಟೀನ್’ನ ಅವಶ್ಯಕತೆ, ಅದರ ನಿರ್ವಹಣೆ, ಅದರ ಆರ್ಥಿಕತೆ ಮುಂತಾದ ವಿಷಯಗಳನ್ನು ಚರ್ಚಿಸಲು ಅವರ ಬಳಿ ‘ಬಂಡವಾಳ’ ಇಲ್ಲದಿರುವುದು.

3. ರಾಜಕೀಯ ಪಕ್ಷಪಾತ. ಒಂದೊಂದು ಮಾಧ್ಯಮ ಒಬ್ಬೊಬ್ಬ ರಾಜಕಾರಣಿಯ / ಆತ ಪ್ರತಿನಿಧಿಸುವ ಪಕ್ಷದ ಮುಖವಾಣಿಗಿಂತ ಭಿನ್ನವಾಗಿಲ್ಲ. ಆದುದರಿಂದ, ಚರ್ಚೆಯಾಗಬೇಕಾದ ಗಂಭೀರ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಚಾಣಾಕ್ಷತೆ ಇಲ್ಲಿ ಕಾಣಬಹುದು.  ಇಂದಿರಾ ಕ್ಯಾಂಟೀನ್ ಜನಪ್ರಿಯತೆ ಹೆಚ್ಚಾಗಬಾರದೆಂದರೆ ರಾಹುಲ್ ಗಾಂಧಿಯ ಭಾಷಣದಲ್ಲಿ ತಪ್ಪನ್ನು ಕಂಡುಹುಡುಕಲೇ ಬೇಕಾಗುತ್ತದೆ.

ಒಟ್ಟಾರೆಯಾಗಿ, ಪ್ರಜಾತಂತ್ರದ ಕಾವಲುನಾಯಿಯಾಗಿರುವ ಮಾಧ್ಯಮಗಳು ರಾಜಕಾರಣಿಗಳ/ ರಾಜಕೀಯ ಪಕ್ಷಗಳ ಸಾಕುನಾಯಿಯಾಗಿರುವುದು ವಾಸ್ತವ, ಹಾಗೂ ವಿಪರ್ಯಾಸಕಾರಿ. ಆದುದರಿಂದಲೇ, ‘ಎಡವಟ್ಟು’ಗಳಿಗೆ ಸಿಗುವ ಮಹತ್ವ, ಮೀಸಲಿಡುವ ಸಮಯ,  ರಫೇಲ್ ಡೀಲ್ ಹಗರಣಗಳಂತ ವಿಷಯಗಳಿಗೆ ಸಿಗುವುದಿಲ್ಲ….

ಐ ಏಸ್ ಬೆಂಗಳೂರು