ರಷ್ಯಾ-ಟರ್ಕಿ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆ

0
458

ಸನ್ಮಾರ್ಗ ವಾರ್ತೆ

ಮಾಸ್ಕೊ,ಆ.29: ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸಲು ರಷ್ಯ-ಟರ್ಕಿ ಸಜ್ಜಾಗಿದೆ. ಟರ್ಕಿ ಅಧ್ಯಕ್ಷ ಉರ್ದುಗಾನ್, ರಷ್ಯ ಅಧ್ಯಕ್ಷ ಪುಟಿನ್‍ರ ನಡುವಿನ ಚರ್ಚೆಯಲ್ಲಿ ಪರಸ್ಪರ ಸಹಕಾರಕ್ಕೆ ಸಹಮತ ಏರ್ಪಟ್ಟಿದೆ. ಸಿರಿಯದ ಇದ್‍ಲಿಬ್‍ನ ಘರ್ಷಣೆಯ ಸ್ಥಿತಿಯನ್ನು ಹಗುರಗೊಳಿಸಲು ಇಬ್ಬರೂ ಜಂಟಿಯಾಗಿ ಕ್ರಮ ಜರಗಿಸುವುದಾಗಿ ಒಮ್ಮತಕ್ಕೆ ಬಂದಿದ್ದಾರೆ. ಕಳೆದ ದಿವಸ ರಷ್ಯ ಸಂದರ್ಶಿಸಿದ ಉರ್ದುಗಾನ್ ಪುಟಿನ್‍ರ ಜತೆ ಸಮಾಲೋಚನೆ ನಡೆಸಿದರು.

ಸಿರಿಯದ ವಿಷಯದಲ್ಲಿ ಎರಡು ದೇಶಗಳು ಭಿನ್ನ ನಿಲುವನ್ನು ಹೊಂದಿವೆ. ಆದರೂ ಪರಸ್ಪರ ಸಹಕರಿಸಲು ಮುಂದೆ ಬಂದಿವೆ. ಕಳೆದ ಎಪ್ರಿಲ್‍ನಿಂದ ಸಿರಿಯದಲ್ಲಿ ರಷ್ಯದ ಬೆಂಬಲಿತ ಸರಕಾರ ಅನಧಿಕೃತವಾಗಿ ಬಾಂಬಿಂಗ್ ನಡೆಸಿದ್ದು ಕೆಲವು ದಿವಸಗಳ ಹಿಂದೆ ಸಿರಿಯದಲ್ಲಿರುವ ಟರ್ಕಿಯ ನಿರೀಕ್ಷಣಾ ಪೋಸ್ಟ್‌ಗಳಿಗೆ ಸಿರಿಯದ ಸೈನಿಕರು ಮುತ್ತಿಗೆ ಹಾಕಿದ್ದರು.