ವೈದ್ಯೆ ‘ಮುಸ್ಲಿಂ’ ಎಂದು ತಿಳಿದ ಬಳಿಕ ಹಲ್ಲೆ ನಡೆಸಿದ ಅಮೇರಿಕನ್ ಮಹಿಳೆ- ಪ್ರಕರಣ ದಾಖಲು

0
701

ಸನ್ಮಾರ್ಗ ವಾರ್ತೆ

ಪುಣೆ,ಸೆ,3: ಅಮೆರಿಕದ ಮಹಿಳೆಯೊಬ್ಬಳು ವೈದ್ಯೆಯೊಬ್ಬರು ‘ಮುಸ್ಲಿಂ’ ಎಂದು ತಿಳಿದ ಬಳಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಮೆರಿಕದ ಪ್ರಜೆಯನ್ನು ಯುನೈಟೆಡ್ ಸ್ಟೇಟ್ಸ್‌‌ನ ಮೊಂಟಾನಾ ನಿವಾಸಿ 43 ವರ್ಷದ ಜೈಮ್‌ಲಿನ್ ಲೂಯಿಸ್ ಎಂದು ಗುರುತಿಸಲಾಗಿದೆ. ಆಗಸ್ಟ್ 24 ರಂದು ಲೂಯಿಸ್ ಬುರ್ಖಾ ಧರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು, ಭಾನುವಾರ ವೈದ್ಯೆಯ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ವೈದ್ಯೆ ಕಸೀಮಾ ಖಾನ್ ದೂರು ದಾಖಲಿಸಿದ್ದಾರೆ. ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಕ್ಲಿನಿಕ್ ಹೊಂದಿರುವ ಖಾನ್, ಶಾಪಿಂಗ್ ಮಾಲ್‌ಗೆ ಹೋಗುವಾಗ ಅವರನ್ನು ತಡೆದು “ತನ್ನ ಧರ್ಮದ ಬಗ್ಗೆ ಕೇಳಿದ ಅಮೇರಿಕನ್ ಮಹಿಳೆಯು ನಾನು ಮುಸ್ಲಿಂ ಎಂದು ತಿಳಿದ ನಂತರ ಅವಾಚ್ಯ ಪದಗಳಿಂದ ನಿಂದಿಸಿ, ದೈಹಿಕವಾಗಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಖಾನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆಗಸ್ಟ್ 24 ರಂದು ಲೂಯಿಸ್ ಕಾಲೇಜು ವಿದ್ಯಾರ್ಥಿ ಶಫಾಕ್ ಶೇಖ್ ಮತ್ತು ಅವಳ ಸ್ನೇಹಿತರು ರಸ್ತೆ ದಾಟುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. “ಅವಳು ನಮ್ಮತ್ತ ಓಡಿ ಬಂದು ನಮ್ಮನ್ನು ಹೊಡೆಯಲು ಪ್ರಯತ್ನಿಸುತ್ತಿದ್ದಳು” ಎಂದು ಶೇಖ್ ಹೇಳಿದರು. “ಅವಳು ನಮ್ಮನ್ನು ಒದೆಯಲು ಪ್ರಯತ್ನಿಸಿದಳು. ನಾವು ಕಾಲೇಜಿನಿಂದ ಊಟಕ್ಕೆ ಹೊರಟಿದ್ದೆವು. ಇದನ್ನು ನಿಭಾಯಿಸುವ ಮನಸ್ಥಿತಿಯಲ್ಲಿ ನಾವು ಇರಲಿಲ್ಲ. ಕೆಲವು ಜನರು ಮಧ್ಯಪ್ರವೇಶಿಸಿದರು, ಆದರೆ ಅವಳು ವಿದೇಶಿಯರಾಗಿದ್ದರಿಂದ ಅವಳನ್ನು ಸ್ಪರ್ಶಿಸಲು ಹಿಂಜರಿದರು ತನಂತರ ಆಕೆ ಪುಣೆಯ ಶಾಪಿಂಗ್ ಮಾಲ್ ಒಳಗೆ ಹೋದರು.” ಎಂದು ತಿಳಿಸಿದ್ದಾರೆ.