‘ಫೋಟೋ ತೆಗೆಯಬೇಕಿತ್ತು, ವಿಡಿಯೋ ಏಕೆ ಮಾಡಿದಿರಿ?’- ಉಪ್ಪು ಮತ್ತು ಚಪಾತಿ ಊಟದ ಕುರಿತು ವರದಿ ಮಾಡಿದ ಪತ್ರಕರ್ತನ ವಿರುದ್ಧ ದೂರು ದಾಖಲಿಸಿದ ಯುಪಿ ಸರಕಾರ!

0
891

ನವದೆಹಲಿ,ಸೆ,3: ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ಮಧ್ಯಾಹ್ನದ ಊಟ ಯೋಜನೆಯಡಿ ಅನ್ನ ಮತ್ತು ರೊಟ್ಟಿಗಳೊಂದಿಗೆ ಉಪ್ಪು ತಿನ್ನಿಸಲಾಗಿದೆ ಎಂದು ವರದಿ ಮಾಡಿದ್ದಕ್ಕಾಗಿ ಉತ್ತರಪ್ರದೇಶದ ಪತ್ರಕರ್ತನ ವಿರುದ್ಧ ‘ಕ್ರಿಮಿನಲ್ ಪಿತೂರಿ’  ಪ್ರಕರಣ ದಾಖಲಾಗಿದೆ.

ಹಿಂದಿ ಡೈಲಿ ಪತ್ರಿಕೆ ಪತ್ರಕರ್ತ ಪವನ್ ಜೈಸ್ವಾಲ್ ವಿರುದ್ಧ ಕ್ರಿಮಿನಲ್ ಪಿತೂರಿ, ಮೋಸ ಮತ್ತು ಸುಳ್ಳು ಸಾಕ್ಷ್ಯಗಳನ್ನು ಒದಗಿಸಲಾಗಿದೆ ಎಂಬ ಪ್ರಕರಣವನ್ನು ದಾಖಲಿಸಲಾಗಿದೆ. ಪತ್ರಕರ್ತನಿಗೆ ಮಾಹಿತಿ ನೀಡಿದ ಆರೋಪದಲ್ಲಿ ಎಫ್ಐಆರ್ ನಲ್ಲಿ ಗ್ರಾಮ ಪ್ರಧಾನ್ ನ ಪ್ರತಿನಿಧಿ ರಾಜ್ ಕುಮಾರ್ ಪಾಲ್ ರವರ ಹೆಸರನ್ನೂ ಹೆಸರಿಸಿದೆ.

ಮಿರ್ಜಾಪುರದ ಬ್ಲಾಕ್ ಶಿಕ್ಷಣ ಅಧಿಕಾರಿ ಪ್ರೇಮ್ ಶಂಕರ್ ರಾಮ್ ಅವರು ಸಲ್ಲಿಸಿದ ದೂರಿನಲ್ಲಿ, ಪತ್ರಕರ್ತ ಮತ್ತು ರಾಜ್ ಕುಮಾರ್ ಪಾಲ್ ರವರು ಉತ್ತರ ಪ್ರದೇಶ ಸರ್ಕಾರವನ್ನು ಮತ್ತು ಮಧ್ಯಾಹ್ನ ಊಟದ ಯೋಜನೆಯನ್ನು ದೂಷಿಸುವ ಸಂಚು ರೂಪಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಮಕ್ಕಳು ಉಪ್ಪಿನೊಂದಿಗೆ ಊಟ ಮಾಡುವುದನ್ನು ನೋಡಿದಾಗ ಪಾಲ್ ತರಕಾರಿಗಳಿಗೆ ವ್ಯವಸ್ಥೆ ಮಾಡಿರಬೇಕಿತ್ತಿ ಅದನ್ನು ಬಿಟ್ಟು ಪತ್ರಕರ್ತನನ್ನು ಆಹ್ವಾನಿಸಿದ್ದು ಪಿತೂರಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮುದ್ರಣ ಪತ್ರಕರ್ತ ಪವನ್ ಜೈಸ್ವಾಲ್ ಅವರು ವಿದ್ಯಾರ್ಥಿಗಳ ಚಿತ್ರಗಳನ್ನು ತೆಗೆದುಕೊಳ್ಳುವ ಬದಲು ವಿಡಿಯೋವನ್ನು ಏಕೆ ಚಿತ್ರೀಕರಿಸಿದ್ದಾರೆ. ಇದು ಸರಕಾರದ ವಿರುದ್ಧ ಅಪಪ್ರಚಾರ ಮಾಡಲು ನಡೆಸಿದ ಕೃತ್ಯ ಎಂದು ಆರೋಪಿಸಲಾಗಿದೆ.

“ಸಹೋದ್ಯೋಗಿ ವಿರುದ್ಧ ಸಲ್ಲಿಸಿದ ಎಫ್‌ಐಆರ್ ವಿರುದ್ಧ 100 ಕ್ಕೂ ಹೆಚ್ಚು ಪತ್ರಕರ್ತರು ಮಿರ್ಜಾಪುರ ಕಲೆಕ್ಟರೇಟ್ ಆಫೀಸ್ ಬಳಿ ಪ್ರತಿಭಟನೆ ನಡೆಸಿದರು.