ಸನ್ಮಾರ್ಗ ವಾರ್ತೆ
ಬೆಂಗಳೂರು,19.ಸೆ: ಕಪ್ಪುಹಣ ಪ್ರಕರಣದಲ್ಲಿ ಎನ್ಫೋರ್ಸ್ಮೆಂಟ್ ಡೈರಕ್ಟರೇಟ್ (ಇಡಿ) ಬಂಧಿಸಿದ ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ರ ಜಾಮೀನು ಅರ್ಜಿಯ ಕುರಿತು ಇಂದು ವಿಶೇಷ ಕೋರ್ಟು ಆದೇಶ ಹೊರಡಿಸಲಿದೆ. ಮಂಗಳವಾರ ಜಾಮೀನು ಅರ್ಜಿ ತಿರಸ್ಕರಿಸಿ ಡಿಕೆಶಿಯವರನ್ನು ಹದಿನಾಲ್ಕು ದಿವಸ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇಡಿಯ ಕಸ್ಟಡಿಯ ಸಮಯ ಮುಗಿದ ಬಳಿಕ ಶಿವಕುಮಾರ್ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.












