ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.21: ಸುರಕ್ಷಾ ಏಜೆನ್ಸಿಗಳು ಕಳೆದ ವಾರ ಒಂದು ಪಟ್ಟಿ ತಯಾರಿಸಿದ್ದು ಅದರ ಪ್ರಕಾರ ಕಾಶ್ಮೀರದಲ್ಲಿ ಒಟ್ಟು 273 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಇವರು ದೊಡ್ಡ ಮಟ್ಟದ ದಾಳಿ ನಡೆಸುವ ಅಪಾಯವಿದೆ. ಇದರಲ್ಲಿ 158 ಭಯೋತ್ಪಾದಕರು ದಕ್ಷಿಣ ಕಾಶ್ಮೀರದಲ್ಲಿ ಮತ್ತು 96 ಉತ್ತರ ಕಾಶ್ಮೀರ ಹಾಗು 19 ಮಧ್ಯ ಕಾಶ್ಮೀರದಲ್ಲಿದ್ದಾರೆ ಎನ್ನಲಾಗಿದೆ.

107 ವಿದೇಶಿ ಭಯೋತ್ಪಾದಕರು ಹಾಗೂ ಸ್ಥಳೀಯ ಭಯೋತ್ಪಾದಕರು ಸೇರಿ ಒಟ್ಟು 166 ಭಯೋತ್ಪಾದಕರಿದ್ದಾರೆ. ಲಷ್ಕರ್, ಹಿಜ್ಬುಲ್, ಜೈಷ್ ಮತ್ತು ಅಲ್ ಬದ್ರ್ಗೆ ಸೇರಿದ ಭಯೋತ್ಪಾದಕರು ಇವರೆಲ್ಲ ಎನ್ನಲಾಗಿದ್ದು ಲಷ್ಕರ್ ತೈಬಾದ 112 ಭಯೋತ್ಪಾದಕರ ಹೆಸರು ಪಟ್ಟಿಯ ಆರಂಭದಲ್ಲಿದೆ. ಹಿಜ್ಬುಲ್ನ 100, ಜೈಷೆಯ 58 ಮತ್ತು ಅಲ್ಬದರ್ನ ಮೂವರು ಭಯೋತ್ಪಾದಕರು ನಂತರದ ಸ್ಥಾನವನ್ನು ಪಡೆದಿದ್ದಾರೆ.

ಆಗಸ್ಟ್ ಐದರಂದು ಕಾಶ್ಮೀರದ 370 ವಿಧಿ ರದ್ದು ಪಡಿಸಿದ ಬಳಿಕ ಇವರು ಗಡಿಯಲ್ಲಿ ಕಾಶ್ಮೀರದೊಳಗೆ ಬರಲು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಪರ್ಕ ಸಾಧನಗಳ ನಿಯಂತ್ರಣದಿಂದಾಗಿ ಇಲ್ಲಿರುವ ಭಯೋತ್ಪಾದಕರಿಗೆ ಅಲ್ಲಿಂದ ಸೂಚನೆ ಲಭಿಸಿಲ್ಲ. ಇದರಿಂದಾಗಿ ಭಯೋತ್ಪಾದಕರ ಶೋಧಕ್ಕೂ ಹಿನ್ನಡೆಯಾಗಿದೆ ಎಂದು ಮೂಲಗಳು ಹೇಳಿವೆ.












