ಸನ್ಮಾರ್ಗ ವಾರ್ತೆ-
ಮಂಗಳೂರು: ಸೆ. 26- ನಗರದ ಪಾಂಡೇಶ್ವರದ ಬಳಿ ಇರುವ ಮಾಲ್ನಲ್ಲಿ ಯುವಕನಿಗೆ ವಿದ್ಯಾರ್ಥಿ ತಂಡ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಬಾಲಾಪರಾಧಿ ಸೇರಿ ಮೂವರನ್ನು ಬಂಧಿಸಿದ್ದ ಪಾಂಡೇಶ್ವರ ಠಾಣಾ ಪೊಲೀಸರು ಇದೀಗ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಹೀಗೆ ಒಟ್ಟು ಐವರು ಆರೋಪಿಗಳನ್ನು ಇದೀಗ ಬಂಧಿಸಿದಂತಾಗಿದೆ. ಅಬ್ದುಲ್ ರಹೀಮ್ ಶಾ ಮತ್ತು ಮಹಮ್ಮದ್ ಮರ್ಝಾಕ್ ಫರಾನ್ನನ್ನು ಇಂದು ಬಂಧಿಸಲಾಗಿದ್ದು, ಇವರಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ ಹೇಳಿದ್ದಾರೆ. ಇನ್ನಷ್ಟು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ಬಂಧನಕ್ಕೆ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ನಗರದ ಎಲ್ಲಾ ಮಾಲ್ ಗಳಿಗೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪೊಲೀಸ್ಭದ್ರತೆ ಒದಗಿಸಲಾಗಿದೆ.












