ಮಂಜೇಶ್ವರ ಉಪಚುನಾವಣೆ: ಕುಂಞಂಬುರ ಬದಲಿಗೆ ಎಲ್‍ಡಿಎಫ್‍ನಿಂದ ಯಕ್ಷಗಾನ ಕಲಾವಿದ ಎಂ.ಶಂಕರ್ ರೈ ಕಣಕ್ಕೆ

0
534

ತಿರುವನಂತಪುರಂ,ಸೆ.26: ಹೊಸ ಅಭ್ಯರ್ಥಿಗಳ ಮೂಲಕ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲುವ ಸಾಧಿಸಲು ಎಲ್‌ಡಿಎಫ್ ಮುಂದಾಗಿದೆ. ಕೇರಳದಲ್ಲಿ ನಡೆಯಲಿರುವ ಐದು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೊಸಮುಖಗಳಿಗೆ ಎಲ್‌ಡಿಎಫ್ ಮಣೆ ಹಾಕಿದ್ದು ಮಂಜೇಶ್ವರದಿಂದ ಯಕ್ಷಗಾನ ಕಲಾವಿದೆ ಎಂ.ಶಂಕರ್ ರೈ ಅಭ್ಯರ್ಥಿಯಾಗಲಿದ್ದಾರೆ.

ಕುಂಞಂಬು ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಅವರ ಬದಲಿಗೆ ರೈಯವರಿಗೆ ಅವಕಾಶ ಕುದುರಿದೆ. ಶಂಕರ್ ರೈ ಸ್ಪರ್ಧಿಸುವ ವಿಚಾರವನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

2006ರಲ್ಲಿ ಮುಸ್ಲಿಂ ಲೀಗ್‍ನ ಚೆರ್ಕಳ ಅಬ್ದುಲ್ಲರನ್ನು ಸೋಲಿಸಿ ಕುಂಞಂಬು ಶಾಸಕರಾಗಿ ಆಯ್ಕೆಯಾಗಿದ್ದರು. ಕುಂಞಂಬು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. ಎರ್ನಾಕುಳಂನಲ್ಲಿ ಪಕ್ಷೇತರ ಅಭ್ಯರ್ಥಿ ಅಡ್ವೊಕೇಟ್ ಮನು ರಾಯಿಯವರನ್ನು ಎಲ್‍ಡಿಎಫ್ ಬೆಂಬಲಿಸಲಿದೆ. ಅವರು ಹಿರಿಯ ಪತ್ರಕರ್ತ ಕೆಂಎಂ ರೋಯಿಯ ಪುತ್ರ ಆಗಿದ್ದಾರೆ. ವಟ್ಟಿಯೂರಕ್ಕಾವಿನಲ್ಲಿ ತಿರುವನಂತಪುರಂ ಮೇಯರ್ ವಿ.ಕೆ. ಪ್ರಶಾಂತನ್ ಸ್ಪರ್ಧಿಸಲಿದ್ದಾರೆ. ಆರೂರಿನಿಂದ ಸಿ.ಪುಳಿಕ್ಕಲ್ ಎಲ್‌ಡಿಎಫ್ ಅಭ್ಯಥಿಯಾಗಲಿದ್ದಾರೆ. ಕೊನ್ನಿಯಂದ ಕೆ.ಯು.ಜನೀಷ್ ಕುಮಾರ್ ಸ್ಪರ್ಧಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೊಡಿಯೇರಿ ತಿಳಿಸಿದರು.