ಸನ್ಮಾರ್ಗ ವಾರ್ತೆ
ಹೈದರಾಬಾದ್,ಸೆ.27: ಕಮಲ್ ಹಾಸನ್ ಮತ್ತು ರಜನೀಕಾಂತ್ ರಾಜಕೀಯದಿಂದ ದೂರವಿರಬೇಕೆಂದು ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಸಲಹೆ ನೀಡಿದ್ದಾರೆ. ಪ್ರಜ್ಞಾಬದ್ಧ ಮನುಷ್ಯರಿಗೆ ರಾಜಕೀಯದಲ್ಲಿ ಮುಂದುವರಿಯುವುದು ಪ್ರಯಾಸ ಎಂದು ತಮಿಳ್ ಮಾಸಪತ್ರಿಕೆ ಆನಂದ ವಿಕಟನ್ಗೆ ನೀಡಿದ ಸಂದರ್ಶನದಲ್ಲಿ ಚಿರಂಜೀವಿ ಹೇಳಿದರು.
ತೆಲುಗು ಸಿನೆಮಾದಲ್ಲಿ ಸ್ಟಾರ್ ಆಗಿದ್ದ ಕಾಲದಲ್ಲಿ ಏನಾದರೂ ಒಳ್ಳೆಯದನ್ನು ಮಾಡೋಣ ಎಂದು ರಾಜಕೀಯ ಪ್ರವೇಶಿಸಿದ್ದೆ. ಆದರೆ ತನ್ನ ಸ್ವಂತ ಕ್ಷೇತ್ರದಲ್ಲೇ ಸೋತೆ. ಕೋಟ್ಯಂತರ ಹಣ ಹರಿಸಿ ತನ್ನನ್ನು ಸೋಲಿಸಲಾಯಿತು. ಸಹೋದರ ರಾಮ್ ಚರಣ್ಗೂ ಇದುವೆ ಆಗಿದೆ. ರಾಜಕೀಯ ಇಂದು ಹಣದ ಆಟವಾಗಿದೆ ಎಂದು ಚಿರಂಜೀವಿ ಹೇಳಿದರು.
ರಾಜಕೀಯದಲ್ಲಿದ್ದು ಜನರಿಗೆ ಒಳ್ಳೆದು ಮಾಡಬೇಕೆಂದು ಬಯಸುವುದಿದ್ದರೆ ಅದೊಂದು ಸವಾಲು ಮತ್ತು ನಿರಾಶೆ. ಅದನ್ನು ಎದುರಿಸಲು ಇಬ್ಬರೂ ಸಿದ್ಧರಿರಬೇಕು. ಲೋಕಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಒಳ್ಳೆಯ ಸಾಧನೆ ತೋರಿಸುವರೆಂದು ನಿರೀಕ್ಷೆಯಿತ್ತು. ಆದರೆ ಹಾಗಾಗಲೇ ಇಲ್ಲ ಎಂದು ಚಿರಂಜೀವಿ ಹೇಳಿದರು. ಚಿರಂಜೀವಿ 2008ರಲ್ಲಿ ಆಂದ್ರಪ್ರದೇಶ್ ಪ್ರಜಾರಾಜ್ಯ ಪಾರ್ಟಿ ಸ್ಥಾಪಿಸಿದ್ದರು. 2009ರಲ್ಲಿ ಹದಿನೆಂಟು ಸೀಟು ಗೆದ್ದಿದ್ದರು. ಆದರೆ ತಿರುಪತಿ ಮತ್ತು ಪಾಲಕೊಲ್ನಲ್ಲಿ ಚಿರಂಜೀವಿ ಸ್ಪರ್ಧಿಸಿ ಸೋಲುಂಡಿದ್ದರು.












