ಅಮೆರಿಕ: ಭಾರತೀಯ ಉದ್ಯಮಿ ಅಪಹರಿಸಿ ಕೊಲೆ

0
567

ಸನ್ಮಾರ್ಗ ವಾರ್ತೆ

ಕ್ಯಾಲಿಪೊರ್ನಿಯ,ಅ.3: ಭಾರತದ ಅನಿವಾಸಿ ಉದ್ಯಮಿ ಡಿಜಿಟಲ್ ಮಾರ್ಕೆಂಟಿಗ್ ಕಂಪೆನಿ ಅತ್ರೆ ನೆಟ್ ಇಂಕ್‍ನ ಸಂಸ್ಥಾಪಕ ತುಷಾರ್ ಅತ್ರೆ (50) ಅವರನ್ನು ಅಪಹರಣಕಾರರು ಅಪಹರಿಸಿ ಕೊಲೆ ಮಾಡಿದ್ದಾರೆ. ಕ್ಯಾಲಿಪೊರ್ನಿಯದ ಸಮತಾ ಕ್ರೂಸ್‍ನ ಅವರ ಮನೆಯಿಂದ ಅಕ್ಟೋಬರ್ ಒಂದರಂದು ತುಷಾರ್‌ರವರ ಅಪಹರಣ ನಡೆದಿತ್ತು. ನಂತರ ಪೊಲೀಸರ ಶೋಧದಲ್ಲಿ ಅವರ ಮೃತದೇಹ ಅವರದೇ ಕಾರಿನಲ್ಲಿ ಪತ್ತೆಯಾಗಿದೆ.

ಮಂಗಳವಾರ ಬೆಳಗ್ಗೆ ಮೂರು ಗಂಟೆಗೆ ತುಷಾರ್ ಅತ್ರೆಯವರನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಆ ವೇಳೆ ತುಷಾರ್‌ರ ಮನೆಯಿಂದ ಪೊಲೀಸ್‍ಗೆ ಎಮರ್ಜೆನ್ಸಿ ಕಾಲ್ ಮಾಡಿದ್ದರು. ನಂತರ ನಡೆದ ಪೊಲೀಸರು ತನಿಖೆಯಲ್ಲಿ ಸಾಂತಕ್ರೂಝ್ ಮೌಂಟೈನ್ ಏರಿಯದಲ್ಲಿ ಅತ್ರೆಯ ಬಿಎಂಡಬ್ಲ್ಯೂ ಎಸ್‍ಯುವಿ ಕಾರು ಪತ್ತೆಯಾಗಿತ್ತು. ಕಾರಿನೊಳಗೆ ತುಷಾರ್‌ರವರ ಮೃತದೇಹ ಇತ್ತು. ಕೊಲೆ ಯತ್ನದ ಹಿಂದೆ ದರೋಡೆ ಉದ್ದೇಶವಿತ್ತೆಂದು ಪೊಲೀಸರು ಹೇಳಿದ್ದಾರೆ.