ಬಾಬರಿ ಮಸೀದಿಯಡಿಯಲ್ಲಿ ಸಿಕ್ಕಿದ ಕಟ್ಟಡದ ಅವಶೇಷಗಳು ಮಂದಿರದ್ದಾಗಿದೆ ಎನ್ನುವುದಕ್ಕೆ ಪುರಾವೆ ತನ್ನಿ- ಸುಪ್ರೀಂ ಕೋರ್ಟ್

0
1400

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.4: ಪ್ರಾಚ್ಯವಸ್ತು ತಜ್ಞರ ಅಗೆತದಲ್ಲಿ ಬಾಬರಿ ಮಸೀದಿಯಡಿಯಲ್ಲಿ ಸಿಕ್ಕಿದ ಕಟ್ಟಡದ ಅವಶೇಷಗಳು ಮಂದಿರದ್ದಾಗಿದೆ ಎನ್ನುವುದಕ್ಕೆ ಪುರಾವೆ ತರಲು ಜಸ್ಟಿಸ್ ಡಿ.ವೈ.ಚಂದ್ರಚೂಡ ಆದೇಶಿಸಿದರು.

ಅವಶೇಷಗಳು ಮಂದಿರದ್ದೆಂದು ಸಾಬೀತು ಪಡಿಸಬೇಕಿರುವುದು ಹಿಂದೂ ಪಕ್ಷದ್ದು. ಅದಕ್ಕೆ ವಾದವನ್ನು ಸಂಪೂರ್ಣವಾಗಿ ಪುರಾವೆಯ ಆಧಾರದಲ್ಲಿ ಆಗಿರಬೇಕೆಂದು ಚಂದ್ರಚೂಡರವರು ಹೇಳಿದರು.

“ಅಗೆದಾಗ ಕಂಡ ಕಟ್ಟಡದ ಅವಶೇಷಗಳು ಹಿಂದೂ ಮಂದಿರದ್ದಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವೈದ್ಯನಾಥನ್ ಹೇಳಿದಾಗ ವಿಶ್ವಾಸ ಮತ್ತು ಭಕ್ತಿ ಬೇರೆ ಬೇರೆ ಎಂದು ಚಂದ್ರಚೂಡ್ ವೈದ್ಯನಾಥರಿಗೆ ನೆನಪಿಸಿದರು.

ವಿಶ್ವಾಸ, ಭಕ್ತಿ ಪುರಾವೆ ಆಲ್ಲ. ಆದರೆ ಪ್ರಕರಣದ ವಾದ ಸಂಪೂರ್ಣ ಬಲವಾದ ಪುರಾವೆಗಳ ಆಧಾರದಲ್ಲಿರಬೇಕು. ಭಾರತ ಇತಿಹಾಸ ದಾಖಲಿಸಿದ ರೀತಿ ಮತ್ತು ಪಾಶ್ಚಾತ್ಯರ ರೀತಿಯೂ ವ್ಯತ್ಯಸ್ತವಾಗಿದೆ ಎಂದು ವೈದ್ಯನಾಥನ್‍ರು ಉತ್ತರಿಸಿದರು.

ನಾವು ಆಚಾರ ಪರಂಪರೆ ಆಧಾರದಲ್ಲಿ ಹೇಳಿದ್ದೇವೆ. ಆದ್ದರಿಂದ ಯುಕ್ತಿ ನೋಡಿ ಅದನ್ನು ತಳ್ಳಿಹಾಕಲು ಆಗದು ಎಂದು ವೈದ್ಯನಾಥನ್ ವಾದಿಸಿದರು. ವೇದಗಳು ಶ್ರುತಿ, ಸ್ಮೃತಿಗಳನ್ನು ನಾವು ತಳ್ಳಿಹಾಕಿ ಹೇಳಿಕೆ ನೀಡಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ವಕೀಲ ರಾಜೀವ್ ಧವನ್ ಹೇಳಿದರು. 1943ರ ಮುಂಚೆ ಬಾಬರಿ ಮಸೀದಿ ಜಮೀನಿನಲ್ಲಿ ಹಿಂದೂಗಳು ಆರಾಧನೆ ಮಾಡುತ್ತಿದ್ದರು ಎಂದು ಸಾಬೀತು ಪಡಿಸಲು ಸಾಕ್ಷಿಗಳ ಹೇಳಿಕೆಗಳಿಂದ ಆಗಿಲ್ಲ ಎಂದು ರಾಜೀವ್ ಧವನ್ ಹೇಳಿದರು.