ಮುಂದಿನ ದಿನಗಳು ಇನ್ನಷ್ಟು ಕಠಿಣ, ದೇಶ ಇನ್ನಷ್ಟು ಆರ್ಥಿಕ ಬಿಕ್ಕಟ್ಟಿನೆಡೆಗೆ ಸಾಗಲಿದೆ: ರಿಸರ್ವ್ ಬ್ಯಾಂಕ್

0
1888

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಅ. 9: ಮುಂದೆ ದೇಶ ಇನ್ನಷ್ಟು ಆರ್ಥಿಕ ಬಿಕ್ಕಟ್ಟಿನೆಡೆಗೆ ಹೋಗಲಿದೆ ಎಂದು ರಿಸರ್ವ್‍ಬ್ಯಾಂಕ್ ಮುನ್ನೆಚ್ಚರಿಕೆ ನೀಡಿದೆ. ಆಂತರಿಕವಾಗಿ ಮತ್ತು ಜಾಗತಿಕವಾಗಿ ಸೃಷ್ಟಿಯಾದ ಪ್ರತಿಕೂಲ ಪರಿಸ್ಥಿತಿ ದೇಶವನ್ನು ಇನ್ನಷ್ಟು ಆರ್ಥಿಕ ಸಮಸ್ಯೆಯ ದವಡೆಗೆ ದೂಡಿಹಾಕಲಿದೆ ಎಂದು ನಾಲ್ಕನೆ ನಾಣ್ಯ ಅವಲೋಕನ ವರದಿಯಲ್ಲಿ ಆರ್‍ಬಿಐ ತಿಳಿಸಿದೆ. ಖಾಸಗಿ ಕ್ಷೇತ್ರದ ಬಳಕೆ ದಾರರು ಭಾರತದ ಆರ್ಥಿಕ ಬೆಳವಣಿಗೆಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಆರ್ಥಿಕ ಹಿನ್ನಡೆ ಒಟ್ಟು ಮಾರಾಟವನ್ನು ಬಾಧಿಸಿದೆ. ಇದು ಮುಂದಿನ ಭವಿಷ್ಯದಲ್ಲಿ ಹೆಚ್ಚು ಸಮಸ್ಯೆ ಸೃಷ್ಟಿಸಲಿದೆ ಎಂದು ವರದಿಯಲ್ಲಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಈಗಿನ ಪರಿಸ್ಥಿತಿಯಲ್ಲಿ ಭಾರತದ ಅತಿದೊಡ್ಡ ಮಾರುಕಟ್ಟೆ ವಾಹನ ಮಾರಾಟ, ರಿಯಲ್‍ಎಸ್ಟೇಟ್ ತೃಪ್ತಿಕರವಾಗಿಲ್ಲ. ಬ್ಯಾಂಕಿನ ಸಾಲ ವಿತರಣೆಯಲ್ಲಿ ದೊಡ್ಡ ಕೊರತೆ ಇದೆ. ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿರುವುದು, ಜಿಎಸ್ಟಿ ರಿಫಂಡಿಂಗ್ ತ್ವರಿತಕ್ಕೆ ಇಲಕ್ಟ್ರಾನಿಕ್ ವ್ಯವಸ್ಥೆ ಜಾರಿಗೆ ತಂದಿರುವುದು, ಕಟ್ಟಡ ನಿರ್ಮಾಣ, ರಫ್ತು ಕ್ಷೇತ್ರದಲ್ಲಿ ರಿಯಾಯಿತಿ ಬಿಕ್ಕಟ್ಟು ಪರಿಹಾರಕ್ಕೆ ಸಹಾಯಕವಾಗಬಹುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಆದರೆ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಭಾರತದಲ್ಲಿ ಹೂಡಿಕೆ ಕಡಿಮೆಯಾಗಲು ವ್ಯಾಪಾರದ ವಿವಾದಗಳು ಕಾರಣವಾಗಿದೆ ಮತ್ತು ಅದು ರಫ್ತು ಕ್ಷೇತ್ರದ ಹಿನ್ನಡೆಗೂ ಕಾರಣವಾಗಿದೆ ಎಂದು ಆರ್‍ಬಿಐ ವರದಿಯಲ್ಲಿ ಹೇಳಲಾಗಿದೆ.