ಬಾಬರಿ ಮಸೀದಿ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಉತ್ತರಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಅಧ್ಯಕ್ಷನಿಂದ ಕೋರ್ಟಿನಲ್ಲಿ ಅರ್ಜಿ!

0
794

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.16: ಬಾಬರಿ ಜಮೀನು ಪ್ರಕರಣದ ಅಂತಿಮ ವಾದ ಕೊನೆಗೊಳ್ಳಲು ಕೆಲವು ದಿವಸ ಇರುವಾಗ ಪ್ರಕರಣದಿಂದ ಹಿಂದೆ ಸರಿಯುತ್ತಿರುವುದಾಗಿ ಬಿಜೆಪಿ ನಿಯಂತ್ರಣದ ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡು ಅಧ್ಯಕ್ಷ ರಿಝ್ವಿ ಅಹ್ಮದ್ ಫಾರೂಕಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟು ನಿಯೋಜಿಸಿದ ಮೂವರು ಮಧ್ಯಸ್ತಿಕೆದಾರರಲ್ಲಿ ಒಬ್ಬರಾದ ಶ್ರೀರಾಮ ಪಂಜು ಮೂಲಕ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ಬಾಬರಿ ಮಸೀದಿ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇವೆ. ಬಾಬರಿ ಮಸೀದಿ ಮೇಲೆ ತಮಗೆ ಹಕ್ಕುವಾದಗಳಿಲ್ಲ ಎಂದು ಸಾಬೀತು ಪಡಿಸಲು ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ ಅಧ್ಯಕ್ಷರು ಶ್ರಮಿಸಿದರು.

ಆದರೆ, ಸುಪ್ರೀಂಕೋರ್ಟು ಅರ್ಜಿಯಲ್ಲಿ ಈವರೆಗೆ ತೀರ್ಮಾನ ಕೈಗೊಂಡಿಲ್ಲ. ಬಾಬರಿ ಮಸೀದಿ ಜಮೀನಿಗೆ ಸಂಬಂಧಿಸಿದ ಇನ್ನೊಂದು ಅರ್ಜಿಯನ್ನು ಪರಿಗಣಿಸಬೇಕೆಂಬ ಮನವಿಯನ್ನು ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಅಧ್ಯಕ್ಷತೆಯ ಪೀಠ ತಳ್ಳಿಹಾಕಿದೆ. ಬಾಬರಿ ಮಸೀದಿ ಪ್ರಕರಣದಲ್ಲಿ ಇಷ್ಟೇ ಸಾಕು. ಇನ್ನೊಂದು ಅರ್ಜಿಗೆ ಅವಕಾಶವಿಲ್ಲ. ಇಂದು ಐದು ಗಂಟೆಗೆ ಅಂತಿಮ ವಾದ ಮುಗಿಯಲಿದೆ ಎಂದು ಚೀಫ್ ಜಸ್ಟಿಸ್ ಹೇಳಿದರು.