ಕಾಶ್ಮೀರದಲ್ಲಿ ಮೊಬೈಲ್ ಮೆಸೇಜ್‌ಗೆ ನಿಷೇಧ

0
643

ಸನ್ಮಾರ್ಗ ವಾರ್ತೆ

ಶ್ರೀನಗರ,ಅ.16: ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್ ಪೈಡ್ ಮೊಬೈಲ್ ಸಂಪರ್ಕ ಮರು ಆರಂಭಿಸಿದ ಬೆನ್ನಿಗೆ ಮೆಸೇಜ್ ಕಳುಹಿಸುವ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ. 72 ದಿವಸಗಳ ಬಳಿಕ ಸೋಮವಾರ ಮಧ್ಯಾಹ್ನ ಮೊಬೈಲ್ ನಿಷೇಧ
ತೆರವಾಗಿತ್ತು. ಜನರು ತುಂಬ ಸಮಾಧಾನ ಪಟ್ಟಿದ್ದರು. ಆದರೆ ಸಂಜೆ ಐದು ಗಂಟೆಗೆ ಎಸ್ಸೆಮ್ಮೆಸ್ ಸ್ಥಗಿತಗೊಳಿಸಲಾಗಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಎಸ್ಸೆಮ್ಮೆಸ್ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೋಸ್ಟ್ ಪೈಡ್ ಕನೆಕ್ಷನ್ ಇದ್ದರೂ ಇಂಟರ್ನೆಟ್ ಸೌಕರ್ಯ ಲಭ್ಯಗೊಳಿಸಲಾಗಿಲ್ಲ. ಎರಡು ತಿಂಗಳಿಗಿಂತಲೂ ಹೆಚ್ಚು ಸಮಯದಲ್ಲಿ ಬಿಲ್ ಪಾವತಿಸದಕ್ಕಾಗಿ ಹಲವರ ಫೋನ್ ಸಂಪರ್ಕವನ್ನು ಟೆಲಿಕಾಂ ಕಂಪೆನಿ ಸ್ಥಗಿತಗೊಳಿಸಿದೆ.