ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.26: ಹರಿಯಾಣ ಚುನಾವಣೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಬಿಎಸ್‍ಎಫ್ ಯೋಧ ತೇಜ್‍ಬಹಾದೂರ್ ಯಾದವ್ ಜೆಜೆಪಿ ಪಾರ್ಟಿಯಿಂದ ಹೊರಬಂದಿದ್ದಾರೆ. ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದ ತೀರ್ಮಾನವನ್ನು ಪ್ರತಿಭಟಿಸಿ ಅವರು ಪಾರ್ಟಿಗೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಗೆ ಬಾಗಿಲು ತೊರೆದೊಡನೆ ದುಷ್ಯಂತ್ ಚೌತಾಲ ಜನರನ್ನು ವಂಚಿಸಿದ್ದಾರೆ ಎಂದು ತೇಜ್ ಬಹಾದೂರ್ ಆರೋಪಿಸಿದರು. ಜೆಜೆಪಿಯ ಬಿ ಟೀಮ್ ಜೆಜೆಪಿ ಆಗಿದೆ. ಎರಡು ಪಾರ್ಟಿಗಳು ಸಮನವಾಗಿದೆ. ಅವೆರಡನ್ನೂ ಜನರು ವಿರೋಧಿಸಬೇಕೆಂದು ತೇಜ್‍ಬಹಾದೂರ್ ಕರೆ ನೀಡಿದ್ದಾರೆ.
ತೇಜ್‍ಬಹಾದೂರ್‌ರನ್ನು 2017ರಲ್ಲಿ ಬಿಎಸ್‍ಎಫ್‍ನಿಂದ ಹೊರಹಾಕಲಾಗಿತ್ತು. ಬಿಎಸ್‍ಎಫ್‍ನಲ್ಲಿ ನೀಡುವ ಆಹಾರದ ಕುರಿತು ಅವರು ವೀಡಿಯೊ ಮಾಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.












