ಹರ್ಯಾಣ: ಮನೋಹರ್ ಲಾಲ್ ಖಟ್ಟರ್ ಬಿಜೆಪಿ ಶಾಸಕಾಂಗ ಪಕ್ಷ ನಾಯಕ

0
396

ಸನ್ಮಾರ್ಗ ವಾರ್ತೆ

ಚಂಡೀಗಡ,ಅ.26: ಹರಿಯಾಣದಲ್ಲಿ ಬಿಜೆಪಿ ಶಾಸಕಾಂಗ ಪಕ್ಷ ನಾಯಕನಾಗಿ ಮನೋಹರ್ ಲಾಲ್ ಖಟ್ಟರ್ ಆಯ್ಕೆಯಾಗಿದ್ದಾರೆ. ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸುವ ಹಕ್ಕನ್ನು ಮತ್ತು ತನ್ನನ್ನು ಬೆಂಬಲಿಸುವ ಶಾಸಕರ ಪಟ್ಟಿಯನ್ನು ಅವರು ನೀಡಲಿದ್ದಾರೆ. ನಾಳೆ ಮಧ್ಯಾಹ್ನ ಎರಡು ಗಂಟೆಗೆ ಪ್ರಮಾಣವಚನ ನಡೆಯಲಿದೆ.

ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದರೂ ಜೆಜೆಪಿ ಮತ್ತು ಪಕ್ಷೇತರರ ಬೆಂಬಲದಿಂದ ಖಟ್ಟರ್ ಪುನಃ ಅಧಿಕಾರಕ್ಕೆ ಬರಲಿದ್ದಾರೆ. ಬಿಜೆಪಿ ಸರಕಾರವನ್ನು ಬೆಂಬಲಿಸುವ ಜೆಜೆಪಿ ನಾಯಕ ದುಶ್ಯಂತ್ ಚೌಟಾಲರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಇಬ್ಬರು ಸಚಿವ ಸ್ಥಾನವನ್ನು ಬಿಜೆಪಿ ಭರವಸೆ ನೀಡಿದೆ.

ಬಂಡುಕೋರರಾಗಿ ಸ್ಪರ್ಧಿಸಿದ ಐವರು ಪಕ್ಷೇತರು ಬಿಜೆಪಿಯನ್ನು ಬೆಂಬಲಿಸುವ ಪತ್ರ ನಿನ್ನೆ ನೀಡಿದ್ದಾರೆ. ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 40 ಸೀಟುಗಳು ಬಿಜೆಪಿ ಗಳಿಸಿದೆ. ಜೆಜೆಪಿ ಹತ್ತು ಸೀಟುಗಳನ್ನು ಗಳಿಸಿದೆ. ಐವರು ಪಕ್ಷೇತರರ ಬೆಂಬಲ ಇರುವುದರಿಂದ ಬಿಜೆಪಿ ಸರಕಾರ ನಿಶ್ಚಿಂತವಾಗಿ ಕಾರ್ಯನಿರ್ವಹಿಸುವ ಅವಕಾಶ ಸೃಷ್ಟಿಯಾಗಿದೆ.